ಲಂಡನ್: ಒಂಬತ್ತು ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್ನಲ್ಲಿ ಆಶ್ರಯ ಪಡೆದಿದ್ದ ಮದ್ಯದ ದೊರೆ ವಿಜಯ ಮಲ್ಯ ರನ್ನು ಲಂಡನ್ ಪೋಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಕ್ರಮ ಹಣಕಾಸು ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆಯನ್ನು ಬಂಧಿಸಲಾಗಿದೆ ಎಂದು ದೂರದರ್ಶನ ತನ್ನ ವರದಿಯಲ್ಲಿ ತಿಳಿಸಿದೆ. 



 


ಮೋಸ್ಟ್ ವಾಂಟೆಡ್ ಪ್ಹುಗೆಟಿವ್ ಉದ್ಯಮಿ ವಿಜಯ್ ಮಲ್ಯ ಭಾರತದ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಲಂಡನ್ಗೆ ಪರಾರಿಯಾಗಿದ್ದರು. ಸಾಲ ಮರು ಪಾವತಿ ಮಾಡದ ಆರೋಪದ ಮೇಲೆ ಮಲ್ಯರನ್ನು ಲಂಡನ್ ನಲ್ಲಿ ಏಪ್ರಿಲ್ 18ರಂದು ಬಂಧಿಸಲಾಗಿತ್ತು. ಕೆಲವೇ ಗಂಟೆಗಳಲ್ಲಿ ಮಲ್ಯ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು.