ಟೊರೊಂಟೊ: ಬೆಚ್ಚಗಿನ ಹವಾಮಾನ ಮತ್ತು ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಕೆನಡಾದಲ್ಲಿ ಉಳಿದಿರುವ ಕೊನೆಯ ಐಸ್ ಶೆಲ್ಫ್ ಬೃಹತ್ ಮಂಜುಗಡ್ಡೆಯ ದ್ವೀಪಗಳಾಗಿ ಚೂರುಚೂರಾಗಿದೆ. 


COMMERCIAL BREAK
SCROLL TO CONTINUE READING

ವಿಜ್ಞಾನಿಗಳ ಪ್ರಕಾರ ಎಲ್ಲೆಸ್ಮೆರೆ ದ್ವೀಪದ ವಾಯುವ್ಯ ಮೂಲೆಯಲ್ಲಿ ಕಂಡುಬರುವ 4,000 ವರ್ಷಗಳಷ್ಟು ಹಳೆಯದಾದ ಕೆನಡಾದ ಮಂಜುಗಡ್ಡೆ ಜುಲೈ ಅಂತ್ಯದ ವೇಳೆಗೆ ದೇಶದ ಕೊನೆಯ ಏಕಶಿಲೆಯ ಮಂಜುಗಡ್ಡೆಯಾಗಿದೆ. ಕೆನಡಾದ ಹಿಮ ಸೇವೆಯ ಐಸ್ ವಿಶ್ಲೇಷಕ ಆಡ್ರಿಯನ್ ವೈಟ್, ಅದರಲ್ಲಿ 43 ಪ್ರತಿಶತದಷ್ಟು ಚೂರಾಗಿದೆ ಎಂಬ ಅಂಶ ಉಪಗ್ರಹದಿಂದ ತೆಗೆದ ಚಿತ್ರಗಳಲ್ಲಿ ಕಂಡು ಬಂದಿದೆ.  ಇದು ಜುಲೈ 30 ಅಥವಾ ಜುಲೈ 31 ರ ಸುಮಾರಿಗೆ ಸಂಭವಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಏಕಶಿಲಾ ಮಂಜುಗಡ್ಡೆ ಸ್ಥಗಿತದಿಂದಾಗಿ ಎರಡು ಬೃಹತ್ ಮಂಜುಗಡ್ಡೆಗಳ ಜೊತೆಗೆ ಎರಡು ಚಿಕ್ಕ ಮಂಜುಗಡ್ಡೆಗಳು ರೂಪುಗೊಂಡಿವೆ ಮತ್ತು ಇವೆಲ್ಲವೂ ಈಗಾಗಲೇ ನೀರಿನಲ್ಲಿ ತೇಲಲು ಪ್ರಾರಂಭಿಸಿವೆ ಎಂದು ವೈಟ್ ಹೇಳಿದ್ದಾರೆ. ಅತಿದೊಡ್ಡ ಮಂಜುಗಡ್ಡೆ ಮ್ಯಾನ್‌ಹ್ಯಾಟನ್‌ನ ಗಾತ್ರದಲ್ಲಿ ಸುಮಾರು 55 ಚದರ ಕಿಲೋಮೀಟರ್ ಮತ್ತು 11.5 ಕಿಲೋಮೀಟರ್ ಉದ್ದವಿದೆ. ಅವುಗಳ ದಪ್ಪ 230 ರಿಂದ 260 ಅಡಿಗಳು. ಇದು ಒಂದು ದೊಡ್ಡ, ತುಂಬಾ ದೊಡ್ಡದಾದ ಮಂಜುಗಡ್ಡೆಯಾಗಿದೆ ಎಂದು ಅವರು ಹೇಳಿದರು.


ಇವುಗಳಲ್ಲಿ ಯಾವುದಾದರೂ ಆಯಿಲ್ ರಿಗ್ (ತೈಲವನ್ನು ಹೊರತೆಗೆಯುವ ವಿಶೇಷ ಸಾಧನ) ಕಡೆಗೆ ಚಲಿಸಲು ಪ್ರಾರಂಭಿಸಿದರೆ, ಅದನ್ನು ತೆಗೆದುಹಾಕಲು ನೀವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ವಿವರಿಸಿದರು. ಅಂತಿಮವಾಗಿ ನಾವು ತೈಲ ರಿಗ್ ಅನ್ನು ತೆಗೆದುಹಾಕಿ ಅದನ್ನು ಬೇರೆ ಸ್ಥಳಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. 187 ಚದರ ಕಿಲೋಮೀಟರ್‌ಗಳಲ್ಲಿ ಹರಡಿರುವ ಮಂಜುಗಡ್ಡೆ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಗಾತ್ರಕ್ಕಿಂತ ದೊಡ್ಡದಾಗಿತ್ತು, ಆದರೆ ಈಗ ಅದು ಕೇವಲ 41 ಪ್ರತಿಶತದಷ್ಟು ಉಳಿದಿದೆ, ಅಂದರೆ 106 ಚದರ ಕಿಲೋಮೀಟರ್ ಆಗಿದೆ ಎಂದವರು ವಿವರಿಸಿದರು.


ಒಟ್ಟಾವಾ ವಿಶ್ವವಿದ್ಯಾಲಯದ ಹಿಮನದಿ ವಿಜ್ಞಾನದ ಪ್ರಾಧ್ಯಾಪಕ ಲ್ಯೂಕ್ ಕೋಪ್ಲ್ಯಾಂಡ್, ಈ ಪ್ರದೇಶದ ತಾಪಮಾನವು ಮೇ ನಿಂದ ಆಗಸ್ಟ್ ಆರಂಭದವರೆಗೆ ಐದು ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ, ಇದು 1980 ರಿಂದ 2010ರ ಸರಾಸರಿಗಿಂತಲೂ ಬೆಚ್ಚಗಿರುತ್ತದೆ. ಆರ್ಕ್ಟಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕಿಂತ ಇಲ್ಲಿ ತಾಪಮಾನವು ವೇಗವಾಗಿ ಏರುತ್ತಿದೆ, ಇದು ಈಗಾಗಲೇ ವಿಶ್ವದ ಇತರ ಭಾಗಗಳಿಗಿಂತ ಹೆಚ್ಚಿನ ತಾಪಮಾನ ಏರಿಕೆಯನ್ನು ಅನುಭವಿಸುತ್ತಿದೆ.