ನವದೆಹಲಿ: ಪ್ಯಾರಿಸ್‌ನಲ್ಲಿರುವ ವಿಶ್ವ-ಪ್ರಸಿದ್ಧ ಲೌವ್ರೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬನು ಮೋನಾಲಿಸಾ ಚಿತ್ರಕ್ಕೆ ಕೇಕ್ ಕ್ರೀಮ್ ಬಳಿದಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಬಿಎಫ್‌ಟಿಎಂವಿ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಘಟನೆಯ ವೀಡಿಯೊಗಳಲ್ಲಿ ವಿಗ್ ಧರಿಸಿ ಕಾಣಿಸಿಕೊಂಡ ವ್ಯಕ್ತಿ, ಗಾಲಿಕುರ್ಚಿಯಲ್ಲಿ ಮೊನಾಲಿಸಾಳ ವರ್ಣಚಿತ್ರದ ಹತ್ತಿರ ಬಂದು ಅದಕ್ಕೆ ಕೇಕ್ ಬಳಿದಿದ್ದಾನೆ.ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್ ಈಗ ಆ ವರ್ಣ ಚಿತ್ರಕ್ಕೆ ಕ್ಲಾಸ್ ಕವಚ ಇದ್ದಿರುವ ಹಿನ್ನೆಲೆಯಲ್ಲಿ ಅದು ಸುರಕ್ಷಿತವಾಗಿದೆ ಎನ್ನಲಾಗಿದೆ.


ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ, 36 ವರ್ಷದ ವ್ಯಕ್ತಿಯನ್ನು ಬಂಧಿಸಿ ಪೊಲೀಸ್ ಪ್ರಧಾನ ಕಛೇರಿಯಲ್ಲಿರುವ ಮನೋವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಸಾಂಸ್ಕೃತಿಕ ಆಸ್ತಿಯನ್ನು ಹಾನಿ ಮಾಡುವ ಪ್ರಯತ್ನಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ.ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸಿಬ್ಬಂದಿ ಗಾಜಿನಿಂದ ಐಸಿಂಗ್ ಅನ್ನು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸುತ್ತದೆ.


ಇದನ್ನೂ ಓದಿ : ಅಯೋಧ್ಯೆ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ ಸಾಂತ್ವನ


ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ'


ಲಿಯೊನಾರ್ಡೊ ಡಾ ವಿನ್ಸಿಯ ಮೇರುಕೃತಿಯಾಗಿದ್ದು, ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧವಾದ ಚಿತ್ರಕಲೆಯ ಪ್ರತಿರೂಪವಾಗಿರುವ ಈ ಕಲಾಕೃತಿಯನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಸಂದರ್ಶಕರು ಬರುತ್ತಾರೆ, ಕೇವಲ 2.5 ಅಡಿ ಎತ್ತರ ಮತ್ತು 2 ಅಡಿಗಿಂತ ಕಡಿಮೆ ಅಗಲವಿರುವ ಸಣ್ಣ ಕಲಾಕೃತಿಯೊಂದಿಗೆ ಪೋಸ್ ನೀಡಲು ಸಾಕಷ್ಟು ಜನ ಸಾಲಿನಲ್ಲಿ ನಿಲ್ಲುತ್ತಾರೆ.


ಈ ಕಲಾಚಿತ್ರವನ್ನು 1911 ರಲ್ಲಿ ಲೌವ್ರೆ ಉದ್ಯೋಗಿಯೊಬ್ಬರು ಕದ್ದಿದ್ದರು, ಆದರೆ ನಂತರ ಅದನ್ನು ಪತ್ತೆಹಚ್ಚಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.