ಕೌಲಲಾಂಪುರ: ಮಲೇಷಿಯಾದ ರಾಜಧಾನಿ ಕೌಲಾಲಂಪುರದಲ್ಲಿ ಧಾರ್ಮಿಕ ಶಾಲೆಯೊಂದರಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದು 25 ಮಂದಿ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. ಇದರಲ್ಲಿ 23 ಮಕ್ಕಳು ಮತ್ತು ಇಬ್ಬರು ವಾರ್ಡನ್ಗಳು ಎಂದು ಹೇಳಲಾಗಿದೆ. ಕಳೆದ 20 ವರ್ಷಗಳಲ್ಲಿ ಮಲೇಷಿಯಾದಲ್ಲಿ ಉಂಟಾದ ಅತ್ಯಂತ ಭೀಕರ ಅಪಘಾತ ಇದಾಗಿದೆ. 


COMMERCIAL BREAK
SCROLL TO CONTINUE READING

ಅಧಿಕೃತ ಮೂಲಗಳಿಂದ ಮಾಹಿತಿಗಳು ಲಭ್ಯವಾಗಿದ್ದು, ಗುರುವಾರ ಬೆಳಿಗ್ಗೆ ನಡೆದಿರುವ ಈ ಅಪಘಾತಕ್ಕೆ ಕಾರಣಗಳು ತಿಳಿದುಬಂದಿಲ್ಲ. ರಾಜಧಾನಿ ಕೌಲಾಲಂಪುರದ ಮಧ್ಯಭಾಗದಲ್ಲಿ ತೆಹ್ಫಿಜ್ ದರುಲ್ ಖುರಾನ್ ಇಟಿಫಾಕಿಯ ಎಂಬ ಹೆಸರಿನ ಧಾರ್ಮಿಕ ಶಾಲೆ ಇದೆ. 


ಕೌಲಾಲಂಪುರದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ನಿರ್ದೇಶಕ ಖುದ್ದೀನ್ ದರ್ಮನ್, ಈ ಅಪಘಾತದಲ್ಲಿ 23 ಮಕ್ಕಳು ಮತ್ತು ಇಬ್ಬರು ವಾರ್ಡನ್ಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.