The Pope Answers: ಬುಧವಾರ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಮುಖಂಡ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರು ಲೈಂಗಿಕತೆಯ ಸದ್ಗುಣಗಳನ್ನು ಶ್ಲಾಘಿಸಿದ್ದು, 'ದೇವರು ಮನುಷ್ಯನಿಗೆ ನೀಡಿದ ಅತ್ಯಂತ ಸುಂದರವಾದ ಸಂಗತಿಗಳಲ್ಲಿ ಸೆಕ್ಸ್ ಒಂದಾಗಿದೆ' ಎಂದು ಬಣ್ಣಿಸಿದ್ದಾರೆ. ತಮ್ಮನ್ನು ತಾವು ಲೈಂಗಿಕವಾಗಿ ವ್ಯಕ್ತಪಡಿಸುವುದು ಒಂದು ಆಶೀರ್ವಾದ ಎಂದು ಪೋಪ್ ಹೇಳಿದ್ದಾರೆ. 'ದಿ ಪೋಪ್ ಆನ್ಸರ್ಸ್' ಎಂಬ ಸಾಕ್ಷ್ಯಚಿತ್ರದಲ್ಲಿ, ಹಸ್ತಮೈಥುನ, ಎಲ್‌ಜಿಬಿಟಿ ಹಕ್ಕುಗಳು, ಗರ್ಭಪಾತ, ಅಶ್ಲೀಲ ಉದ್ಯಮ, ಲೈಂಗಿಕತೆ, ಧರ್ಮ ಮತ್ತು ಲೈಂಗಿಕ ದೌರ್ಜನ್ಯದಂತಹ ಜಾಗತಿಕ ಸಮಸ್ಯೆಗಳ ಬಗ್ಗೆ ಪೋಪ್ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಸಾಕ್ಷ್ಯಚಿತ್ರದಲ್ಲಿ ಯುವಕರೊಂದಿಗೆ ಸಂಭಾಷಣೆ
ಕಳೆದ ವರ್ಷ, ಪೋಪ್ 20 ರ ಹರೆಯದ 10 ಯುವಕರೊಂದಿಗೆ ಮಾತನಾಡಿದ್ದರು ಮತ್ತು ಈ ಸಾಕ್ಷ್ಯಚಿತ್ರವು ಆ ಸಂಭಾಷಣೆಗಳನ್ನು ಆಧರಿಸಿದೆ. 'ಆನ್ಸರ್ಸ್' ನಲ್ಲಿ, ಕೆಲವು ಹದಿಹರೆಯದವರು ಮತ್ತು ಯುವಕರೊಂದಿಗಿನ ಸಂಭಾಷಣೆಗಳನ್ನು ವಿವರವಾಗಿ ತೋರಿಸಲಾಗಿದೆ.


ಹಸ್ತಮೈಥುನದ ಬಗ್ಗೆ ಹೇಳಿಕೆ
ಸಾಕ್ಷ್ಯಚಿತ್ರದಲ್ಲಿ ಹಸ್ತಮೈಥುನವನ್ನು ಉಲ್ಲೇಖಿಸುತ್ತಾ, 'ತಮ್ಮನ್ನು ತಾವು ಲೈಂಗಿಕವಾಗಿ ವ್ಯಕ್ತಪಡಿಸುವುದು ಮನುಷ್ಯನ ಸಮೃದ್ಧಿಯಾಗಿದೆ, ಆದ್ದರಿಂದ ನಿಜವಾದ ಲೈಂಗಿಕ ಅಭಿವ್ಯಕ್ತಿಯಿಂದ ದೂರವಿರುವುದು ನಿಮ್ಮನ್ನು ಮತ್ತು ಲೈಂಗಿಕತೆಯ ಸಮೃದ್ಧಿಯನ್ನು ಕುಗ್ಗಿಸುತ್ತದೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ-Fat Man In Demand On Adult Site: ವಯಸ್ಕರರ ತಾಣದಲ್ಲಿ ಕೇವಲ ಹೊಟ್ಟೆ ತೋರಿಸಿ ಕೋಟಿ-ಕೋಟಿ ಗಳಿಸುತ್ತಾನೆ ಈ ವ್ಯಕ್ತಿ!


ಗರ್ಭಪಾತ ಮಾಡುವ ಮಹಿಳೆಯರಿಗೆ ಚರ್ಚ್ ಕರುಣೆ ತೋರಿಸಬೇಕು: ಪೋಪ್
ಗರ್ಭಪಾತದ ಬಗ್ಗೆ ಮಾತನಾಡಿರುವ ಪೋಪ್ ಫ್ರಾನ್ಸಿಸ್,  ಗರ್ಭಪಾತ ಮಾಡುವ ಮಹಿಳೆಯರಿಗೆ ಪಾದ್ರಿಗಳು ದಯೆ ತೋರಬೇಕು ಎಂದು ಹೇಳಿದ್ದಾರೆ. ಆದರೆ, ಗರ್ಭಪಾತದ ಪದ್ಧತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. 'ಮಹಿಳೆ ಗರ್ಭಪಾತ ಮಾಡಿಸಿಕೊಂಡಿದ್ದರೆ, ಅವಳನ್ನು ಬೆಂಬಲಿಸುವುದು ಒಂದು ವಿಷಯ ಮತ್ತು ಗರ್ಭಪಾತವನ್ನು ಸಮರ್ಥಿಸುವುದು ಮತ್ತೊಂದು  ವಿಷಯ' ಎಂದು ಪೋಪ್ ಹೇಳಿದ್ದಾರೆ.


ಇದನ್ನೂ ಓದಿ-OMG! ಕುಡಿದ ಮತ್ತಿನಲ್ಲಿ ಓರ್ವ ಯುವಕ ಮತ್ತೊರ್ವ ಯುವಕನ ಜೊತೆಗೆ ವಿವಾಹವಾದ... ಮುಂದೇನಾಯ್ತು ತಿಳಿಯಲು ಸುದ್ದಿ ಓದಿ


ವ್ಯಾಟಿಕನ್ ಪತ್ರಿಕೆಯಲ್ಲಿ ಪ್ರಕಟವಾದ ಹೇಳಿಕೆ
ಪೋಪ್‌ನ ಈ ಕಾಮೆಂಟ್‌ಗಳನ್ನು ವ್ಯಾಟಿಕನ್ ಚರ್ಚ್‌ನ ಅಧಿಕೃತ ಪತ್ರಿಕೆಯಾದ ಎಲ್'ಓಸರ್ವಟೋರ್ ರೊಮಾನೋ ಕೂಡ ಪ್ರಕಟಿಸಿದೆ. ಯುವಕರೊಂದಿಗೆ ಪೋಪ್ ನಡೆಸಿದ ಈ ಸಂಭಾಷಣೆಯನ್ನು ಪತ್ರಿಕೆಯು 'ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆ' ಎಂದು ಕರೆದಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.