ನವದೆಹಲಿ: ಅಮೇರಿಕಾ ಜೊತೆಗಿನ ಒಪ್ಪಂದದ ಅನ್ವಯ ತಾಲಿಬಾನ್ ಅಗಸ್ಟ್ 31 ರವರೆಗೆ ನೂತನ ಸರ್ಕಾರವನ್ನು ರಚಿಸುವುದಿಲ್ಲ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅಮೇರಿಕಾ ಆಫ್ಘಾನ್ ದೇಶದಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿರುವ ಹಿನ್ನಲೆಯಲ್ಲಿ ಈಗ ತಾಲಿಬಾನ್ ಅಲ್ಲಿಯವರೆಗೆ ಕಾಯಲಿದೆ ಎನ್ನಲಾಗಿದೆ, ಅಫ್ಘಾನಿಸ್ತಾನದ ಅಧಿಕಾರಿಯೊಬ್ಬರು ಈಗ ತಾಲಿಬಾನ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಅನಾಮಧೇಯ ಸ್ಥಿತಿಯ ಮೇಲೆ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು. 


ಇದನ್ನೂ ಓದಿ: Viral Video: ಜನಸಂದಣಿ ಚದುರಿಸಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಗುಂಡಿನ ದಾಳಿ..!


ತಾಲಿಬಾನ್ ಪ್ರಮುಖ ಸಂಧಾನಕಾರ ಅನಸ್ ಹಕ್ಕಾನಿ ತನ್ನ ಮಾಜಿ ಸರ್ಕಾರಿ ಸಂವಾದಕರಿಗೆ ತಾಲಿಬಾನ್ ಯುಎಸ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.ಅಂತಿಮ ವಾಪಸ್ಸಾತಿ ದಿನಾಂಕ ಮುಗಿಯುವವರೆಗೂ ಏನೂ ಮಾಡಬೇಡಿ ಎಂದು ತಿಳಿಸಿದ್ದಾರೆ ಎಂದು ಅಫ್ಘಾನ್ ಅಧಿಕಾರಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗೆ ತಿಳಿಸಿದರು.


ಕಾಬೂಲ್ ಪತನದ ನಂತರ ಆಗಸ್ಟ್ 15 ರಂದು ಅಶ್ರಫ್ ಘನಿ ಹೊರಟುಹೋದ ನಂತರ ದೇಶವು ಅಸ್ತವ್ಯಸ್ತವಾಗಿದೆ, ಅಂದಿನಿಂದ ದೇಶವು ಈಗ ತಾಲಿಬಾನ್ ಹಿಡಿತದಲ್ಲಿದೆ.ಆದರೆ ಇದುವರೆಗೆ ಅಧಿಕೃತವಾಗಿ ಆಡಳಿತದ ನೇತೃತ್ವವನ್ನು ವಹಿಸಿಕೊಂಡಿಲ್ಲ ಎನ್ನಲಾಗಿದೆ.ಈ ಮೊದಲು ಅಫ್ಘಾನಿಸ್ತಾನ (Afghanistan) ದ ಮಾಜಿ ಸಚಿವ ಅಲಿ ಅಹ್ಮದ್ ಜಲಾಲಿಯವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ ಎಂದು ವರದಿಯಾಗಿತ್ತು , ಆದರೆ ಈಗ ತಾಲಿಬಾನಿಗಳು ದೇಶದ ಸಂಪೂರ್ಣ ಅಧಿಕಾರವನ್ನು ತಮ್ಮ ಕೈವಶಕ್ಕೆ ತೆಗೆದುಕೊಳ್ಳಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆಗೆ ಜಲಾಲಿ ಕೂಡ ತನ್ನನ್ನು ಅಂತಹ ಹುದ್ದೆಗೆ ಪರಿಗಣಿಸಿಲ್ಲ ಮತ್ತು ಅಂತಹ ಸ್ಥಾನದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.


ಇದನ್ನೂ ಓದಿ: Afghanistan Crisis: ಕಾಬೂಲ್ ವಶದ ಬಳಿಕ ಭಾರತದ ವಿರುದ್ಧ ದೊಡ್ಡ ಹೆಜ್ಜೆ ಇಟ್ಟ ತಾಲಿಬಾನ್..!


ಪ್ರಸ್ತುತ, ಯಾವುದೇ ಸರ್ಕಾರವಿಲ್ಲ, ಆದರೆ ವಿದೇಶಿ ಪಡೆಗಳು ತಮ್ಮ ಜನರನ್ನು ದೇಶದಿಂದ ಸ್ಥಳಾಂತರಿಸಲು ಹರಸಾಹಸ ಪಡುತ್ತಿವೆ. ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಆಗಸ್ಟ್ 15 ರಂದು ಕಾಬೂಲ್ ತೊರೆದು ಪಂಜಶೀರ್ ಕಣಿವೆಯಲ್ಲಿದ್ದು, ದೇಶದ ಹಂಗಾಮಿ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ.


ತಾಲಿಬಾನ್‌ಗಳು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು, ತಾಲಿಬಾನ್‌ಗಳು ಎಲ್ಲ ದೇಶಗಳೊಂದಿಗೆ ಶಾಂತಿಯುತ ಸಂಬಂಧವನ್ನು ಬಯಸುತ್ತವೆ ಮತ್ತು ಯಾವುದೇ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ವಿಶ್ವಕ್ಕೆ ಒಂದು ಮಧ್ಯಮ ಸಂದೇಶವನ್ನು ರವಾನಿಸಿದೆ.ಶರಿಯಾ ಕಾನೂನಿನ ಅಡಿಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ಗುಂಪು ಹೇಳಿದೆ.


ತಾಲಿಬಾನ್ ಭಾನುವಾರ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಮತ್ತು ಇತ್ತೀಚೆಗೆ ಹೊಸ ಸರ್ಕಾರ ರಚನೆ ಕುರಿತು ಚರ್ಚಿಸಲು ಆರಂಭಿಸಿದ ಕೆಲವು ದಿನಗಳ ನಂತರ, ಶುಕ್ರವಾರ ಕಾಬೂಲ್‌ನ ಬೀದಿಗಳಲ್ಲಿ ತಮ್ಮ ಹಕ್ಕುಗಳ ಪ್ರತಿಭಟನೆಯಲ್ಲಿ ಅಫ್ಘಾನಿಸ್ತಾನದ ಮಹಿಳೆಯರು ಫಲಕಗಳನ್ನು ಹಿಡಿದಿರುವುದನ್ನು ಕಾಣಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ