ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಶುಕ್ರವಾರ ಕ್ಲೋಸ್ಡ್ ಡೋರ್ ಸಭೆಯನ್ನು ಪ್ರಾರಂಭಿಸಿತು. ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವ ವಿಚಾರದ ಬಗ್ಗೆ ಚರ್ಚಿಸಲು ಪ್ರಾರಂಭಿಸಿತು.ಈ ಸಭೆಯಲ್ಲಿ ಚೀನಾ ದೇಶವು ಪಾಕ್ ನ ಕಳವಳಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಸಭೆಯಲ್ಲಿನ ಸಮಾಲೋಚನೆಗಳು ಅನೌಪಚಾರಿಕವಾಗಿರುವುದರಿಂದ ಯುಎನ್‌ಎಸ್‌ಸಿ ಸಭೆಯ ಫಲಿತಾಂಶವು ಔಪಚಾರಿಕ ಘೋಷಣೆಯಾಗುವುದಿಲ್ಲ ಎನ್ನಲಾಗಿದೆ. ಐದು ಖಾಯಂ ಸದಸ್ಯರು ಮತ್ತು 10 ಖಾಯಂ ಸದಸ್ಯರಿಗೆ ಮಾತ್ರ ಮುಕ್ತವಾಗಿರುವ ಈ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.ಯುಎನ್‌ಎಸ್‌ಸಿಯ ಖಾಯಂ ಸದಸ್ಯ ಮತ್ತು ಪಾಕಿಸ್ತಾನದ ಆಪ್ತ ಮಿತ್ರನಾಗಿದ್ದ ಚೀನಾ, ಕೌನ್ಸಿಲ್‌ನಲ್ಲಿ ಕ್ಲೋಸ್ಡ್ ಡೋರ್ ಸಭೆ ನಡೆಸಲು ಕೇಳಿಕೊಂಡಿತ್ತು, ಇದು ತನ್ನ ಚರ್ಚೆಯನ್ನು ಬೆಳಿಗ್ಗೆ 10 ಗಂಟೆಗೆ (ಸಂಜೆ 7: 30 ಕ್ಕೆ ಭಾರತೀಯ ಕಾಲಮಾನ) ಭದ್ರತಾ ಮಂಡಳಿ ಸಮಾಲೋಚನಾ ಕೊಠಡಿಯಲ್ಲಿ ಪ್ರಾರಂಭಿಸಿತು ಎನ್ನಲಾಗಿದೆ.


ಆಗಸ್ಟ್ 5 ರಂದು ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ಭಾರತದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ ನವದೆಹಲಿಯೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿ ಕೂಡಲೇ ಭಾರತೀಯ ಹೈಕಮಿಷನರ್ ಅವರನ್ನು ಹೊರಹಾಕಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ತನ್ನ ಕ್ರಮವು ಆಂತರಿಕ ವಿಷಯವಾಗಿದೆ ಮತ್ತು ಈ ವಾಸ್ತವವನ್ನು ಒಪ್ಪಿಕೊಳ್ಳುವಂತೆ ಭಾರತ ಪಾಕಿಸ್ತಾನಕ್ಕೆ ಸಲಹೆ ನೀಡಿತು.


ರಷ್ಯಾದ ಉಪ ಖಾಯಂ ಪ್ರತಿನಿಧಿ ಡಿಮಿಟ್ರಿ ಪಾಲಿಯನ್ಸ್ಕಿ ಸಭೆ ಕೊಠಡಿಗೆ ಪ್ರವೇಶಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂಬುದು ಮಾಸ್ಕೋದ ಅಭಿಪ್ರಾಯವಾಗಿದೆ ಎಂದು ಹೇಳಿದರು.