ನವದೆಹಲಿ: ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಾಗ್ದಾದಿಯನ್ನು ಗುರಿಯಾಗಿಸಿಕೊಂಡು ಅಮೇರಿಕಾ ಕಾರ್ಯಾಚರಣೆ ನಡೆಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ ಗೆ ತಿಳಿಸಿದ್ದಾರೆ.



COMMERCIAL BREAK
SCROLL TO CONTINUE READING

ಆದರೆ ಅಧಿಕಾರಿ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಲಿಲ್ಲ ಮತ್ತು ಅದು ಯಶಸ್ವಿಯಾಗಿದೆಯೇ ಎಂದು ಹೇಳಲಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ರಾಯಿಟರ್ಸ್ ಸಂಪರ್ಕಿಸಿದಾಗ ಇತರ ಯುಎಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕಾರ್ಯಾಚರಣೆಯ ಫಲಿತಾಂಶದ ಬಗ್ಗೆ ಯುಎಸ್ ಸೈನ್ಯದ ಅಧಿಕಾರಿಯನ್ನು ಉಲ್ಲೇಖಿಸಿ ನ್ಯೂಸ್ವೀಕ್, ಈ ದಾಳಿಯಲ್ಲಿ ಅಲ್-ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. 


ಟ್ರಂಪ್ ಭಾನುವಾರ ಬೆಳಿಗ್ಗೆ 9 ಗಂಟೆಗೆ ಪ್ರಮುಖ ಹೇಳಿಕೆ ನೀಡುವುದಾಗಿ ಶ್ವೇತಭವನದ ವಕ್ತಾರ ಹೊಗನ್ ಗಿಡ್ಲಿ ಶನಿವಾರ ಘೋಷಿಸಿದರು. ಆದರೆ ಈ ವೇಳೆ ಗಿಡ್ಲಿ ಹೆಚ್ಚಿನ ವಿವರಗಳನ್ನು ನೀಡಿರಲಿಲ್ಲ. ಇದೆ ವೇಳೆ ಅಧ್ಯಕ್ಷ ಟ್ರಂಪ್ ದೊಡ್ಡ ಘಟನೆಯೊಂದು ಸಂಭವಿಸಿದೆ ಎಂದು ಟ್ವೀಟ್ ಮೂಲಕ ತಿಳಿಸಿದರು.