ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾಧನೆ ನಿಗ್ರಹಿಸಲು ಪ್ರತ್ಯೇಕ ಯೋಜನೆಗೆ ಮುಂದಾದ ಅಮೇರಿಕಾ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಅಧಿಕೃತ ರಾಜ್ಯ ಒಕ್ಕೂಟದ ಭಾಷಣದಲ್ಲಿ ಪ್ರಸ್ತಾಪಿಸುತ್ತಾ, ಯುದ್ಧದಲ್ಲಿ ಹಾನಿಗೊಳಗಾದ ಆಫ್ಘಾನಿಸ್ತಾನವನ್ನು ಒಳಗೊಂಡು ದಕ್ಷಿಣ ಏಷ್ಯಾ ಪ್ರದೇಶಕ್ಕೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ವಿದೇಶಾಂಗ ನೀತಿಯಲ್ಲಿ ಅಮೇರಿಕಾ ರೂಪಿಸುತ್ತಿದೆ ಎಂದು ತಿಳಿಸಿದರು
ಅಫ್ಘಾನಿಸ್ತಾನದಲ್ಲಿನ ನಮ್ಮ ಸೈನಿಕರು ಸಹ ಈ ಕುರಿತಾಗಿ ಹೊಸ ಯೋಜನೆಗಳನ್ನು ಹೊಂದಿದ್ದಾರೆ. ಇವೆಲ್ಲವುಗಳು ಕೂಡಾ ಆಫ್ಗಾನಿಸ್ತಾನದ ಸಹಯೋಗದೊಂದಿಗೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಆದರೆ ಈ ಎಲ್ಲ ಯೋಜನೆಗಳನ್ನು ನಾವು ವೈರಿಗಳೆದರು ಬಹಿರಂಗಪಡಿಸುವುದಿಲ್ಲವೆಂದು ಟ್ರಂಪ್ ಸ್ಪಷ್ಟಪಡಿಸಿದರು.
ಇದೆ ವೇಳೆಯಲ್ಲಿ ದಕ್ಷಿಣ ಏಷ್ಯಾದಲ್ಲಿ ಐಎಸ್ ಮತ್ತು ಅಲ್ ಖೈದಾ ಉಗ್ರ ಸಂಘಟನೆಗಳ ಮೂಲಕ ಹೆಚ್ಚುತ್ತಿರುವ ಭಯೋತ್ಪಾದನೆ ನಿಗ್ರಹದ ಕುರಿತಾಗಿ ಗಮನಹರಿಸಿರುವ ಅಮೇರಿಕಾ ಆ ನಿಟ್ಟಿನಲ್ಲಿ ಈ ಪ್ರದೇಶಕ್ಕೆ ಹೊಸ ನಿಯಮಾವಳಿಗಳನ್ನು ರೂಪಿಸಲಿದೆ ಎಂದು ಟ್ರಂಪ್ ತಿಳಿಸಿದರು.