ನವದೆಹಲಿ: ಚೀನಾ, ಭಾರತ ಮತ್ತು ರಷ್ಯಾದಂತಹ ದೇಶಗಳು ತಮ್ಮ ಧೂಮ ಮತ್ತು ಕೈಗಾರಿಕಾ ಸ್ಥಾವರಗಳನ್ನು ಸ್ವಚ್ಛಗೊಳಿಸಲು ಏನೂ ಮಾಡುತ್ತಿಲ್ಲ ಮತ್ತು ಸಮುದ್ರದಲ್ಲಿ ತೇಲುತ್ತಿರುವ ಕಸ ಲಾಸ್ ಏಂಜಲೀಸ್‌ಗೆ ಹರಿದು ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಜಾಗತಿಕ ಹವಾಮಾನ ಬದಲಾವಣೆಯನ್ನು ಸಂಕೀರ್ಣ ವಿಷಯ ಎಂದ ಡೊನಾಲ್ಡ್ ಟ್ರಂಪ್ ತಮ್ಮನ್ನು ಹಲವು ರೀತಿಯಲ್ಲಿ ಪರಿಸರವಾದಿ ಎಂದು ಹೇಳಿದರು. ಆದ್ದರಿಂದ ... ನಾನು ಹವಾಮಾನವನ್ನು ತುಂಬಾ ಇಷ್ಟಪಡುತ್ತೇನೆ. ಆದರೆ ನಾನು ಭೂಮಿಯಲ್ಲಿ ಸ್ವಚ್ಛವಾದ ಗಾಳಿಯನ್ನು ಬಯಸುತ್ತೇನೆ - ನನಗೆ ಶುದ್ಧ ಗಾಳಿ - ನೀರು ಇರಬೇಕು' ಎಂದು ಟ್ರಂಪ್ ಮಂಗಳವಾರದಂದು ನ್ಯೂಯಾರ್ಕ್ನ ಎಕನಾಮಿಕ್ ಕ್ಲಬ್ನಲ್ಲಿ ಹೇಳಿಕೆ ನೀಡಿದ್ದಾರೆ 


ಪ್ಯಾರಿಸ್ ಹವಾಮಾನ ಒಪ್ಪಂದವು ಅಮೆರಿಕಕ್ಕೆ ವಿಪತ್ತು, ಈ ಒಪ್ಪಂದವು ಅಮೆರಿಕಕ್ಕೆ ಟ್ರಿಲಿಯನ್ ಮತ್ತು ಟ್ರಿಲಿಯನ್ ಡಾಲರ್ ವಿನಾಶಕ್ಕೆ ಕಾರಣವಾಗಬಹುದು ಎಂದು ತಿಳಿಸಿದರು. 'ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ. 2030 ರವರೆಗೆ ಚೀನಾದಲ್ಲಿ ಈ ಒಪ್ಪಂದ ಪ್ರಾರಂಭವಾಗುವುದಿಲ್ಲ, ರಷ್ಯಾದ 1990 ರ ದಶಕಕ್ಕೆ ಹಿಂದಿರುಗಿದಾಗ, ಅಲ್ಲಿ ಮೂಲ ವರ್ಷವು ವಿಶ್ವದಲ್ಲೇ ಅತ್ಯಂತ ಕೊಳಕಾದ ವರ್ಷವಾಗಿತ್ತು. ಭಾರತ, ನಾವು ಅವರಿಗೆ ಹಣವನ್ನು ಪಾವತಿಸಬೇಕಾಗಿರುವುದರಿಂದ ಅವುಗಳು ಅಭಿವೃದ್ಧಿಶೀಲ ರಾಷ್ಟ್ರ. ಅದಕ್ಕೇನು ನಾನು ಹೇಳುವೆ ನಾವು ಕೂಡ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ,'ಎಂದು ಟ್ರಂಪ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.


ವ್ಯಾಪಾರ ನೀತಿ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳಿಗೆ ಸಂಬಂಧಿಸಿರುವ ಅಪಾಯದ ಬಗ್ಗೆ ಅವರು ಹೇಗೆ ಯೋಚಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ಜನರು  ಈ ಪ್ರಶ್ನೆಯನ್ನು ಕೇಳಿದಾಗ ... ಹವಾಮಾನದ ಬಗ್ಗೆ - ನಾನು ಯಾವಾಗಲೂ ಹೇಳುತ್ತೇನೆ: ನಿಮಗೆ ತಿಳಿದಿರುವಂತೆ ನನಗೆ ಸ್ವಲ್ಪ ಸಮಸ್ಯೆ ಇದೆ' ಎಂದು ವ್ಯಂಗವಾಡಿದರು.


"ನಮ್ಮಲ್ಲಿ ಸಣ್ಣ ತುಂಡು ಭೂಮಿ ಇದೆ. ನೀವು ಚೀನಾದಂತಹ ಕೆಲವು ದೇಶಗಳಿಗೆ ಹೋಲಿಸುತ್ತೀರಿ, ಭಾರತ, ರಷ್ಯಾ ಹಾಗೂ ಇತರ ದೇಶಗಳು ತಮ್ಮ ಧೂಮವನ್ನು ಸ್ವಚ್ಛಗೊಳಿಸಲು ಏನೂ ಮಾಡುತ್ತಿಲ್ಲ,ಅವರು ಸಮುದ್ರದಲ್ಲಿ ಬಿಡುತ್ತಿರುವ ಕಸ ಲಾಸ್ ಏಂಜಲೀಸ್‌ಗೆ ಹರಿದು ಬರುತ್ತಿದೆ' ಎಂದು ಹೇಳಿದರು.