ವಿಯಾನ್ ಜಾಗತಿಕ ಶೃಂಗಸಭೆ: ಭಾರತ ಮತ್ತು ಯುಎಇ ನಡುವೆ ವಿಶೇಷ ಸಂಬಂಧವಿದೆ -ನವದೀಪ್ ಸೂರಿ
ವಿಯಾನ್ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಯುಎಇ ಭಾರತೀಯ ರಾಯಭಾರಿ ನವದೀಪ್ ಸೂರಿ ಭಾರತ ಮತ್ತು ಯುಎಇ ನಡುವೆ ವಿಶೇಷ ಸಂಬಂಧವಿದೆ ಎಂದು ಹೇಳಿದರು.
ದುಬೈ: ವಿಯಾನ್ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಯುಎಇ ಭಾರತೀಯ ರಾಯಭಾರಿ ನವದೀಪ್ ಸೂರಿ ಭಾರತ ಮತ್ತು ಯುಎಇ ನಡುವೆ ವಿಶೇಷ ಸಂಬಂಧವಿದೆ ಎಂದು ಹೇಳಿದರು.
ಅಕ್ಟೋಬರ್ 2 ರಂದು ಬುರ್ಜ್ ಖಲೀಫಾದ ಮೇಲೆ ಬಿತ್ತರಿಸಿದ ಮಹಾತ್ಮಾ ಗಾಂಧಿ ಚಿತ್ರದ ಬಗ್ಗೆ ಪ್ರಸ್ತಾಪಿಸಿ ಗಮನವು ಎರಡು ದೇಶಗಳ ವಿಶೇಷ ಸಂಬಂಧದ ಬಗ್ಗೆ ನವದೀಪ್ ಸೂರಿ ಮಾತನಾಡಿದರು.ಇದಕ್ಕೂ ಮೊದಲು ವಿಯಾನ್ ಜಾಗತಿಕ ಶೃಂಗಸಭೆಯನ್ನು ಯುಎಇ ಕ್ಯಾಬಿನೆಟ್ ಸದಸ್ಯ ಶೇಖ್ ನಹಾಯನ್ ಮಬಾರಕ್ ಅಲ್ ನಹಾಯನ್ ಅವರು ಉದ್ಘಾಟಿಸಿದ್ದರು.
"ದ್ವಿಪಕ್ಷೀಯ ವಹಿವಾಟು ಕಳೆದ ವರ್ಷ 52 ಶತಕೋಟಿ $ ನಷ್ಟಿತ್ತು,ಅಮೆರಿಕಾದ ನಂತರ ಯುಎಇ ಎರಡನೇ ಅತಿದೊಡ್ಡ ರಫ್ತು ಪಾಲುದಾರ" ಎಂದು ಹೇಳಿದರು.
"ನಾನು ದುಬೈನಲ್ಲಿ ಒಂದು ಕಚೇರಿಯನ್ನು ಹೊಂದಿರದ ಒಂದು ಪ್ರಮುಖ ಮಧ್ಯಪ್ರಾಚ್ಯ ದೇಶವನ್ನು ಕಲ್ಪಿಸಲು ಕೂಡ ಸಾಧ್ಯವಿಲ್ಲ," 3.3 ದಶಲಕ್ಷ ಭಾರತೀಯರು ಇಲ್ಲಿದ್ದಾರೆ. ಆ ಮೂಲಕ ಭಾರತದ ಹೊರಗಡೆ ಇರುವ ಅತಿ ಹೆಚ್ಚು ಭಾರತೀಯರು ಇರುವ ಸ್ಥಳ ಎಂದು ಹೇಳಬಹುದು ಎಂದರು.
ಇದೇ ವೇಳೆ ಇಲ್ಲಿ ನಿರ್ಮಿಸಲಾಗುತ್ತಿರುವ ಹಿಂದು ದೇವಸ್ತಾನ ಮತ್ತು ಭಾರತಕ್ಕೆ ಅಪರಾಧಿಗಳು ಹಿಂದಿರುಗುವಿಕೆ ಕೂಡ ಭಾರತ-ಯುಎಇ ಸಂಬಂಧದ ವಿಚಾರವಾಗಿ ತಿಳಿಸುತ್ತದೆ ಎಂದು ಯುಎಇಯ ಭಾರತೀಯ ರಾಯಭಾರಿ ಹೇಳಿದರು.