ನವದೆಹಲಿ: ಗೌತಮ್ ಬುದ್ಧನ ಜನ್ಮಸ್ಥಳ ಕುರಿತಾದ ವಿವಾದವನ್ನು ಭಾರತ ತಳ್ಳಿಹಾಕಿದೆ.ಬುದ್ಧ ನು ಭಾರತದವನು ಎಂದು ನೇಪಾಳದಲ್ಲಿನ ಕೆಲವು ನಾಯಕರು ನೀಡಿದ ಹೇಳಿಕೆ ಬೆನ್ನಲೇ ಭಾರತದ ಪ್ರತಿಕ್ರಿಯೆ ಬಂದಿದೆ.


COMMERCIAL BREAK
SCROLL TO CONTINUE READING

'ನಮ್ಮ ಹಂಚಿಕೆಯ ಬೌದ್ಧ ಪರಂಪರೆಯ" ಬೌದ್ಧಧರ್ಮದ ಸ್ಥಾಪಕರು ನೇಪಾಳದ ಲುಂಬಿನಿಯಲ್ಲಿ ಜನಿಸಿದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.


ಶನಿವಾರ ನಡೆದ ವೆಬ್‌ನಾರ್ ಸಂದರ್ಭದಲ್ಲಿ, ಜೈಶಂಕರ್ ಅವರು ಭಾರತದ ನೈತಿಕ ನಾಯಕತ್ವ ಮತ್ತು ಬುದ್ಧ ಮತ್ತು ಮಹಾತ್ಮ ಗಾಂಧಿಯವರ ಬೋಧನೆಗಳು ಇನ್ನೂ ಹೇಗೆ ಪ್ರಸ್ತುತವಾಗಿವೆ ಎಂಬುದರ ಕುರಿತು ಪ್ರಸ್ತಾಪಿಸಿದ್ದಾರೆ.ಆದರೆ, ಬುದ್ಧ ಭಾರತೀಯನೆಂದು ನೇಪಾಳ ಮಾಧ್ಯಮಗಳು ಉಲ್ಲೇಖಿಸಿವೆ.


ನವದೆಹಲಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಈ ಸಂದರ್ಭದಲ್ಲಿ ಸಚಿವರ ಹೇಳಿಕೆಗಳು 'ನಮ್ಮ ಹಂಚಿಕೆಯ ಬೌದ್ಧ ಪರಂಪರೆಯನ್ನು ಉಲ್ಲೇಖಿಸಿಸುತ್ತವೆ ಎಂದು ಹೇಳಿದರು."ಗೌತಮ್ ಬುದ್ಧ ನೇಪಾಳದ ಲುಂಬಿನಿಯಲ್ಲಿ ಜನಿಸಿದನೆಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಶ್ರೀವಾಸ್ತವ ಹೇಳಿದರು.


ಈ ಹಿಂದೆ, ನೇಪಾಳದ ಮಾಧ್ಯಮಗಳಲ್ಲಿ ಉಲ್ಲೇಖಿಸಿದ ಶ್ರೀ ಜೈಶಂಕರ್ ಅವರ ಹೇಳಿಕೆಗೆ ನೇಪಾಳ ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತು, "ಇದು ಬುದ್ಧನು ನೇಪಾಳದ ಲುಂಬಿನಿಯಲ್ಲಿ ಜನಿಸಿದನೆಂಬುದಕ್ಕೆ ಐತಿಹಾಸಿಕ ಪುರಾವೆಗಳಿಂದ ಸಾಬೀತಾಗಿರುವ ಒಂದು ಸುಸ್ಥಾಪಿತ ಮತ್ತು ನಿರಾಕರಿಸಲಾಗದ ಸತ್ಯ" ಎಂದು ಹೇಳಿದ್ದಾರೆ.


2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಸಂಸತ್ತನ್ನುದ್ದೇಶಿಸಿ ಮಾತನಾಡುತ್ತಾ ಹೀಗೆ ಹೇಳಿದರು: "ವಿಶ್ವದ ಶಾಂತಿಯ ಪ್ರತೀಕ ಬುದ್ಧ ಹುಟ್ಟಿದ ದೇಶ ನೇಪಾಳ" ಎಂದು ಹೇಳಿದ್ದರು.


ಮಾಜಿ ಪ್ರಧಾನಿ ಮತ್ತು ನೇಪಾಳದ ಆಡಳಿತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಮಾಧವ್ ಕುಮಾರ್ ನೇಪಾಳ, ಬುದ್ಧ ಒಬ್ಬ ಮಹಾನ್ ಭಾರತೀಯನೆಂದು ಜೈಶಂಕರ್ ಮಾಡಿದ ಹೇಳಿಕೆಯು ಆಧಾರರಹಿತ ಮತ್ತು ಆಕ್ಷೇಪಾರ್ಹ ಎಂದು ಹೇಳಿದರು.ಅದೇ ರೀತಿ ನೇಪಾಳಿ ಕಾಂಗ್ರೆಸ್ ವಕ್ತಾರ ಬಿಶ್ವಾ ಪ್ರಕಾಶ್ ಶರ್ಮಾ ಕೂಡ "ಭಗವಾನ್ ಬುದ್ಧ ನೇಪಾಳದಲ್ಲಿ ಜನಿಸಿದನು" ಎಂದು ಹೇಳಿದರು.