ಓಸ್ಲೋ : ನೀರಿಲ್ಲದೆ ಬದುಕುವುದು ಬಹಳ ಕಷ್ಟ. ನೀರು (Water) ನಮ್ಮ ಜೀವನದ ಅನಿವಾರ್ಯ. ಈಗ ಶುದ್ಧ ನೀರು ಬೇಕು ಎಂದಾದರೆ ಹಣ ಪಾವತಿಸಬೇಕು.  ವಿಶ್ವದಲ್ಲಿ ನೀರಿಗೆ ದುಬಾರಿ ಹಣ ಪಾವತಿಸುವ ಸ್ಥಳ ಎಂದರೆ ನಾರ್ವೆಯ ರಾಜಧಾನಿ ಓಸ್ಲೋ.  ಬ್ಲೂಮ್‌ಬರ್ಗ್ ವರದಿಯ ಪ್ರಕಾರ,  ಓಸ್ಲೋದಲ್ಲಿ ನೀರಿನ ಬಾಟಲಿಯ (Bottled water) ಬೆಲೆ ಉಳಿದ ನಗರಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ. 


COMMERCIAL BREAK
SCROLL TO CONTINUE READING

ಆಯ್ಕೆ ಮಾಡಲಾದ ನಗರಗಳು : 
 Holidu ಗುರುವಾರ ಬಿಡುಗಡೆ ಮಾಡಿದ ಸಮೀಕ್ಷೆಯ ವರದಿಯಲ್ಲಿ 500 ಮಿಲಿ ಬಾಟಲ್ ನೀರಿಗೆ ಓಸ್ಲೋದಲ್ಲಿ ದುಬಾರಿ ಬೆಲೆ ನೀಡ ಬೇಕಾಗುತ್ತದೆ.  ಕಂಪನಿಯ Water Price Index ಅಮೆರಿಕಾದ 30  ಮತ್ತು ವಿಶ್ವದ 120 ನಗರಗಳಲ್ಲಿನ ಬಾಟಲಿ ನೀರಿನ (Water) ಬೆಲೆ ಮತ್ತು ನಲಿ ನೀರಿನ ಬೆಲೆಯನ್ನು ಹೋಲಿಸಿ ನೋಡಿದೆ. ಪ್ರವಾಸಿ ತಾಣವಾಗಿ ಜನಪ್ರಿಯತೆಯ ಆಧಾರದ ಮೇಲೆ ಈ ನಗರಗಳನ್ನು ಸರ್ವೆಯಲ್ಲಿ ಸೇರಿಸಲಾಗಿತ್ತು. 


ಇದನ್ನೂ ಓದಿ :  ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಕ್ಷಮಾಪಣೆಗೆ ಪಟ್ಟು ಹಿಡಿದ ರಷ್ಯಾ


ಟ್ಯಾಪ್ ನೀರು ಕೂಡಾ ಬಲು ದುಬಾರಿ : 
ನಲ್ಲಿ ನೀರಿನ ವಿಷಯಕ್ಕೆ ಬಂದರೆ ಓಸ್ಲೋ  ನಂತರ ಲಾಸ್ ಏಂಜಲೀಸ್, ಫೀನಿಕ್ಸ್, ಸ್ಯಾನ್ ಫ್ರಾನ್ಸಿಸ್ಕೊ ​​ಮತ್ತು ಸ್ಯಾನ್ ಡಿಯಾಗೋನಲ್ಲಿ ನಲ್ಲಿ ನೀರು ದುಬಾರಿಯಾಗಿದೆ.  ಸೇರಿದಂತೆ ವಿಶ್ವದ 20 ನಗರಗಳಲ್ಲಿ ಸೇರಿವೆ. ವರದಿಯ ಪ್ರಕಾರ, ಸಮೀಕ್ಷೆಯಲ್ಲಿ ಸೇರಿಸಲಾದ ಇತರ ದೇಶಗಳಿಗಿಂತ ಓಸ್ಲೋದಲ್ಲಿ ಟ್ಯಾಪ್ ನೀರು  (Tap water) 212%  ದಷ್ಟು ದುಬಾರಿಯಾಗಿದೆ ಮತ್ತು ಬಾಟಲಿ ನೀರಿನ ದರಗಳು 195% ರಷ್ಟು ಹೆಚ್ಚಾಗಿದೆ. 


ಬಾಟಲ್ ನೀರಿನ ಬಳಕೆ ಹೆಚ್ಚುತ್ತಲೇ ಇದೆ : 
ಹವಾಮಾನ ಬದಲಾವಣೆಯು ನೀರಿನ ಲಭ್ಯತೆ, ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ವಸಂಸ್ಥೆ (WHO) ಕಳೆದ ವರ್ಷ ನೀಡಿದ ವರದಿಯಲ್ಲಿ ತಿಳಿಸಿದೆ. Holidu ನಡೆಸಿದ ಸಮೀಕ್ಷೆಯಲ್ಲಿ, ವಿವಿಧ ಕಂಪನಿಗಳ ನೀರಿನ ಬಾಟಲಿಗಳ ಬೆಲೆಗಳು ಬೇರೆ ಬೇರೆ ನಗರಗಳಲ್ಲಿ ಬೇರೆ ಬೇರೆಯಾಗಿವೆ.  ಕಳೆದ ದಶಕದಲ್ಲಿ ಬಾಟಲಿ ನೀರಿನ ಬಳಕೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಿದೆ.  


ಇದನ್ನೂ ಓದಿ :  Plane: ಈ ಹಳ್ಳಿಯಲ್ಲಿ ಪ್ರತಿಯೊಬ್ಬರ ಬಳಿಯಲ್ಲೂ ಇದೇ ತಮ್ಮದೇ ವಿಮಾನ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.