ಜೋಹಾನ್ಸ್‌ಬರ್ಗ್: ಮಾರ್ಚ್‌ನಿಂದ ಕಟ್ಟುನಿಟ್ಟಾದ  ಲಾಕ್‌ಡೌನ್ (Lockdown)ನಿಂದಾಗಿ ದೇಶದಲ್ಲಿ ಆಲ್ಕೊಹಾಲ್ ಮಾರಾಟವನ್ನು ನಿಷೇಧಿಸಲಾಗಿದೆ. ಕೊರೊನಾವೈರಸ್‌ನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ 66 ದಿನಗಳ ಲಾಕ್‌ಡೌನ್ ಮುಗಿಯುವ ಒಂದು ದಿನದ ಮೊದಲು, ನಗರದ ಕೆಲವು ಕಳ್ಳರು ಸುರಂಗವನ್ನು ತಯಾರಿಸುವ ಮೂಲಕ ಮದ್ಯದಂಗಡಿಯೊಳಗೆ ನುಗ್ಗಿ ಅಲ್ಲಿಂದ ಸುಮಾರು 13 ಲಕ್ಷ 60 ಸಾವಿರ ರೂಪಾಯಿ ಮೌಲ್ಯದ ಮದ್ಯ (Liquor) ಕಳುವು ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಸೋಮವಾರ ಬೆಳಿಗ್ಗೆ ಅಂಗಡಿ ತೆರೆದ ನಂತರ ಕಳ್ಳರು 300,000 ರ್ಯಾಂಡ್ (ಸುಮಾರು US $ 18000) ಮದ್ಯದೊಂದಿಗೆ ಅಲ್ಲಿಂದ ಓಡಿಹೋಗಿದ್ದಾರೆ. ಆದರೆ ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ ಕಳ್ಳರನ್ನು ಗುರುತಿಸಲಾಗಿದೆ ಎಂದು ಅಂಗಡಿಯ ಮಾಲೀಕರು ತಿಳಿಸಿದ್ದಾರೆ. ಈ ಕಳ್ಳರು 10 ದಿನಗಳ ಹಿಂದೆ ಅಂಗಡಿಗೆ ಬಂದಿದ್ದರು ಎಂದು ಮಾಹಿತಿ ನೀಡಿದ್ದು ಅವರನ್ನು ಹಿಡಿದು ಕೊಟ್ಟವರಿಗೆ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ನೀಡಿದ್ದಕ್ಕಾಗಿ 50,000 ರಾಂಡ್‌ನ ಬಹುಮಾನವನ್ನು ಘೋಷಿಸಲಾಗಿದೆ.


ಲಾಕ್‌ಡೌನ್ ನಿರ್ಬಂಧದಿಂದಾಗಿ ಜನರು ಮದ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಇದನ್ನು ಕಳ್ಳತನ ಮಾಡಿ ಕಪ್ಪು ಮಾರುಕಟ್ಟೆಯಲ್ಲಿ 10 ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ದೇಶದಲ್ಲಿ ಮದ್ಯದಂಗಡಿಗಳಲ್ಲಿ ಕಳ್ಳತನದ ಘಟನೆಗಳು ಹೆಚ್ಚುತ್ತಿರುವ ಕಾರಣ ಈ ಅಂಗಡಿ ಮಾಲೀಕರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.