ದೇಶದ ಹಾಗೂ ವಿಶ್ವದ ಅನೇಕ ನಗರಗಳಲ್ಲಿ ಸೈಕ್ಲಿಂಗ್ ಅನ್ನು ಅಳವಡಿಸಿಕೊಳ್ಳಲಾಗುತ್ತಿದೆ. ವಾಹನ ಸಂಚಾರ ದಟ್ಟಣೆಯಿಂದ ದೂರ ಉಳಿಯಲು ಹಾಗೂ ವಾಯುಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ಬಹುತೇಕರು ಮೋಟಾರು ವಾಹನ, ಬೈಕ್ ಗಳನ್ನು ಬಿಟ್ಟು ಸೈಕಲ್ ನಲ್ಲಿ ಕಾಲೇಜಿಗೆ, ಕಚೇರಿಗೆ ಹೋಗುವ ಪರಿಪಾಠ ಬೆಳೆಸಿಕೊಳ್ಳುತ್ತಿದ್ದಾರೆ. ಅಲ್ಲದೆ, ದೊಡ್ಡ ದೊಡ್ಡ ದೇಶಗಳಲ್ಲಿ ಸಹ ಇದಕ್ಕೆ ಉತ್ತೇಜನ ನಿದಲಾಗುತ್ತಿದೆ. ಆದರೆ, ಈ ದೇಶ ಮಾತ್ರ ಜನರು ಸೈಕಲ್ ಬಳಸುವಂತೆ ಉತ್ತೇಜಿಸಲು ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ!


COMMERCIAL BREAK
SCROLL TO CONTINUE READING

ನೆದರ್ಲೆಂಡ್ ನಲ್ಲಿ ಸೈಕಲ್ ನಲ್ಲಿ ಕಚೇರಿಗೆ ಹೋಗುವ ಉದ್ಯೋಗಿಗಳಿಗೆ ಅಲ್ಲಿನ ಸರ್ಕಾರ ಪ್ರತಿ ಕಿಲೋಮೀಟರ್'ಗೆ ಇಷ್ಟು ಹಣ ಎಂದು ನೀಡುತ್ತಿದೆ. ಇದರಿಂದಾಗಿ ಅಲ್ಲಿ ಎಲ್ಲಿ ನೋಡಿದರೂ ಜನರಿಗಿಂತ ಸೈಕಲ್ ಗಳೇ ಹೆಚ್ಚು ಕಾಣಸಿಗುತ್ತವೆ.  ನೆದರ್ಲೆಂಡ್ ನಲ್ಲಿ ಸೈಕಲ್ ಬಳಸುವ ಪ್ರತಿ ಉದ್ಯೋಗಿಗೂ ಪ್ರತಿ ಕಿ.ಮೀ.ಗೆ 0.22 ಡಾಲರ್(ಸುಮಾರು 16 ರೂ.) ಹಣವನ್ನು ಸರ್ಕಾರ ನೀಡುತ್ತಿದೆ. ಅಷ್ಟೇ ಅಲ್ಲ, ಅಲ್ಲಿನ ಕಂಪನಿಗಳೂ ಸಹ ಈ ನಿಯಮವನ್ನು ಕಡ್ದಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.


ನೆದರ್ಲೆಂಡ್ ನಂತೆಯೇ ಯೂರೋಪಿನ ಹಲವು ರಾಷ್ಟ್ರಗಳಲ್ಲಿ 'bicycle to work scheme' ಜಾರಿಯಲ್ಲಿದೆ. ಹೀಗಾಗಿ ಸೈಕಲ್ ಬಳಸಿ ಕಚೇರಿಗೆ ತೆರಳುವವರಿಗೆ ಪ್ರತಿ ಕಿಲೋ ಮೀಟರ್ ಗೆ ಇಷ್ಟು ಹಣ ಎಂದೂ ಸಹ ಅಲ್ಲಿನ ಸರ್ಕಾರಗಳು ನಿಗದಿಪಡಿಸಿವೆ. ಇಂಗ್ಲೆಂಡ್, ಬೆಲ್ಜಿಯಂ ದೇಶಗಳ ರಸ್ತೆಗಳಲ್ಲಿ ಸಾಕಷ್ಟು ಬೈಸಿಕಲ್ ಗಳನ್ನೂ ಸಹ ಕಾಣಬಹುದು. ಅಷ್ಟೇ ಅಲ್ಲ, ಈ ದೇಶಗಳಲ್ಲಿ ನೀವು ಸೈಕಲ್ ಖರೀದಿಸುವವರಿಗೆ ತೆರಿಗೆಯಲ್ಲೂ ವಿನಾಯಿತಿ ದೊರೆಯಲಿದೆ.