ನವದೆಹಲಿ: ವಿಡಿಯೋ ಕಾಲ್ ಗಾಗಿ ಮುಂಚೂಣಿಯಲ್ಲಿರುವ ಕಂಪನಿ Skype ಅಪ್ಡೇಟ್ ಆಗಿದೆ. ಈ ಅಪ್ಡೇಟ್ ಅಡಿ ಗ್ರಾಹಕರಿಗೆ Skype ಆಪ್ ಮೇಲೆ ಇದೀಗ Meet Now ವೈಶಿಷ್ಟ್ಯ ಸಿಗುತ್ತಿದೆ. ಈ ವೈಶಿಷ್ಟ್ಯವನ್ನು ಬಳಸಿ ನೀವು ಯಾವುದೇ ರೀತಿಯ ಸೈನ್ ಅಪ್ ಸಹಾಯ ಪಡೆಯದೇ Skype ಕಾಲ್ ನಲ್ಲಿ ಪಾಲ್ಗೊಳ್ಳಬಹುದು. Skypeನ ಈ ವೈಶಿಷ್ಟ್ಯ ಜನರ ಮಧ್ಯೆ ತನ್ನ ಅಸ್ತಿತ್ವವನ್ನು ಹೆಚ್ಚಿಸುತ್ತಿರುವ Zoom ಆಪ್ ಗೆ ತೀವ್ರ ಪೈಪೋಟಿ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ನೌಕರರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಕಚೇರಿ ಕೆಲಸಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರಲ್ಲಿ Zoom ತನ್ನದೇ ಆದ ಗುರುತು ಸೃಷ್ಟಿಸುತ್ತಿದೆ. ಆದರೆ, ಇತ್ತೀಚಿಗೆ ವರದಿಯೊಂದು ಪ್ರಕಟವಾಗಿದ್ದು, ವರದಿಯಲ್ಲಿ Zoom ಆಪ್ ಡೇಟಾ ಸೋರಿಕೆಯಲ್ಲಿ ತೊಡಗಿದೆ ಆರೋಪಗಳು ಕೇಳಿಬಂದಿದ್ದವು. ಈ ನಡುವೆ Skype ತನ್ನ Meet Now ವೈಶಿಷ್ಟ್ಯವಾನು ಜಾರಿಗೊಳಿಸಿದ್ದು, ಜನರ ಭಾರಿ ಮನ್ನಣೆಗೆ ಈ ಆಪ್ ಪಾತ್ರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Meet Now ಆಪ್ ನಲ್ಲಿ ಏನಿದೆ ವೈಶಿಷ್ಟ್ಯ


Meet Now, ಸ್ಕೈಪ್ ಆಪ್ ನ ಒಂದು ವೈಶಿಷ್ಟ್ಯವಾಗಿದ್ದು, ಇದನ್ನು ನೀವು ಯಾವುದೇ ರೀತಿಯ ಸೈನ್ ಆಪ್ ಸಹಾಯ ಪಡೆಯದ ವಿಡಿಯೋ ಕಾಲ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಇದಕ್ಕಾಗಿ ವಿಡಿಯೋ ಕಾಲ್ ನಲ್ಲಿ ನಿರತರಾಗಿರುವ ಯಾವುದೇ ಒಬ್ಬ ಸ್ಕೈಪ್ ಬಳಕೆದಾರ Meet Now ವೈಶಿಷ್ಟ್ಯ ಬಳಸುವುದು ಅಗತ್ಯವಾಗಿದೆ. ಇದರಿಂದ Meet Now ಬಳಸದೆ ಇರುವ ಬಳಕೆದಾರರಿಗೂ ಕೂಡ ಈ ವಿಂಡೋ ತೆರೆದುಕೊಳ್ಳಲಿದೆ. ಇದರಲ್ಲಿ ನಿರ್ಮಾಣಗೊಳ್ಳುವ ಲಿಂಕ್ ಅನ್ನು ನೀವು ತಂಡದ ಯಾವುದೇ ಸದಸ್ಯರ ಜೊತೆಗೂ ಕೂಡ ಹಂಚಿಕೊಳ್ಳಬಹುದು. ಇನ್ನೊಂದೆಡೆ ನೀವು ಹಂಚಿಕೊಂಡಿರುವ ಲಿಂಕ್ ಅನ್ನು ಬಳಸಿ ನಿಮ್ಮ ತಂಡದ ಯಾವುದೇ ಸದಸ್ಯ ವಿಡಿಯೋ ಕಾಲ್ ನಲ್ಲಿ ಪಾಲ್ಗೊಳ್ಳಬಹುದು. ಅಷ್ಟೇ ಅಲ್ಲ ಇದರಲ್ಲಿ ನೀವು ನಿಮ್ಮ ರಿಯಾಕ್ಷನ್ ಕೂಡ ನೀಡಬಹುದಾಗಿದೆ. Skype ನ Meet Now ಗಾಗಿ ಹಂಚಿಕೊಲ್ಲಲಾಗುವ ಲಿಂಕ್ ಅನ್ನು ನೀವು 30 ದಿನಗಳ ಅವಧಿಯವರೆಗೆ ಯಾವಾಗ ಬೇಕಾದರೂ ಬಳಸಬಹುದಾಗಿದೆ.


Skype ವಿಶ್ವದ ಮಾಹಿತಿ ತಂತ್ರಜ್ಞಾನದ ಅತಿ ದೊಡ್ಡ ಕಂಪನಿಯಾಗಿರುವ ಮೈಕ್ರೋಸಾಫ್ಟ್ ನ ಒಂದು ಪ್ರಾಡಕ್ಟ್ ಆಗಿದ್ದು, ಇದು 2003ರಲ್ಲಿ ಬಿಡುಗಡೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ.