ನವದೆಹಲಿ: ಇದೇನಪ್ಪಾ ಕಾಲು ಇಷ್ಟೊಂದು ದಪ್ಪ ಊದಿಕೊಂಡಿದೆ. ಇದೇನು ಆನೆ ಕಾಲು ರೋಗವೇ ಅಥವಾ ಮತ್ಯಾವ ರೋಗ ಎಂದು ಆಲೋಚಿಸುತ್ತಿದ್ದಿರಾ! ನೀವೇನಾದರೂ ಹಾಗೆ ಆಲೋಚಿಸುತ್ತಿದ್ದಾರೆ ಅದು ಖಂಡಿತಾ ತಪ್ಪು. ಯಾಕೆಂದ್ರೆ ಇಂದು ಮನುಷ್ಯನ ಕಾಲಲ್ಲ; ಆಲೂ ಕಾಲು!!


COMMERCIAL BREAK
SCROLL TO CONTINUE READING

ಹೌದು, ಬ್ರೆಜಿಲ್'ನ ಸ್ಥಳೀಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಲೂಗದ್ದೆ ಬೆಳೆದಿದ್ದರು. ಅದನ್ನು ಹೊರತೆಗೆಯುವಾಗ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಥೇಟ್ ಮನುಷ್ಯನ ಕಾಲಿನ ಆಕಾರನ್ನೇ ಹೊಂದುವ, 6 ಬೆರಳುಗಳ ಬೃಹತ್ ಗಾತ್ರದ ಆಲೂಗಡ್ಡೆ ಅದಾಗಿತ್ತು. ಈ ಆಲೂಗಡ್ಡೆ ಮನುಷ್ಯನ ಮೊಣಕಾಲಿನಷ್ಟು ಎತ್ತರ ಇದೆ. ಆಲೂಗಡ್ಡೆ ಮೇಲಿನ ನಾರುಗಳು ಕೂದಲಿನಂತೆ ಕಾಣುತ್ತದೆ. ಅಷ್ಟಕ್ಕೂ ಈ ಆಲೂಗಡ್ಡೆ ತೂಕ ಎಷ್ಟು ಗೊತ್ತೇ? ಬರೋಬ್ಬರಿ 8 ಕೆ.ಜಿ.!  


[[{"fid":"169934","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಬ್ರೆಜಿಲ್​​​'ನ ಸಾಂಟಾ ಕಾಂಟಾರಿನಾದ ಮೆಲೈರೋದಲ್ಲಿನ ರೈತ ಮಾರ್ಲಿ ಹಾಗೂ ಅವರ ಪತ್ನಿ ಪೌಲೋ ತಮ್ಮ ಮನೆಯ ಹಿಂದಿನ ತೋಟದಲ್ಲಿ ಕಳೆದ 6 ವರ್ಷಗಳಿಂದ ಆಲೂಗಡ್ಡೆ  ಬೆಳೆಯುತ್ತಿದ್ದಾರೆ. ಆದರೆ ಈ ಬಾರಿಯ ಆಲೂಗಡ್ಡೆ ವಿಶ್ವದ ಗಮನ ಸೆಳೆಯುತ್ತದೆ ಎಂದು ಅವರೆಂದೂ ಭಾವಿಸಿರಲಿಲ್ಲ. ಆರಂಭದಲ್ಲಿ ಬೃಹತ್ ಗಾತ್ರದ ಆಲೂಗಡ್ಡೆ ಕಂಡು ದಂಪತಿ ಹೆದರಿದ್ದರಂತೆ. ಆದರೀಗ ಇದನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಆಲೋಚನೆ ನಡೆಸಿದ್ದಾರೆ ಎಂದು 'ಯಾಹೂ ನ್ಯೂಸ್' ವರದಿ ಮಾಡಿದೆ.