ನವದೆಹಲಿ: ಈಗ ಸಾಕಷ್ಟು ಸೋಶಿಯಲ್ ಮೀಡಿಯಾಗಳು ಬಂದು ಎಲ್ಲದಕ್ಕೂ ಒಂದೊಂದು ಲಾಗಿನ್ ಆಗುವುದು ಮತ್ತು ಬಗೆ ಬಗೆಯ ಪಾಸ್ ವರ್ಡ್ ಗಳನ್ನು ಸೆಟ್ ಮಾಡುವುದು ಹೀಗೆ ಮಾಡುವುದರ ಮೂಲಕ ಒಂದು ರೀತಿಯ ಕಿರಿ ಕಿರಿ ಅನುಭವಿಸುವಂತಾಗಿದೆ.


COMMERCIAL BREAK
SCROLL TO CONTINUE READING

ಆದರೆ ಈಗ ಸದ್ಯದಲ್ಲೇ ಇದೆಲ್ಲದಕ್ಕೂ ಅಂತಿಮ ತೆರೆ ಬೀಳುವ ಕಾಲ ಈಗ ಬಂದಿದೆ. ಓ ಅದೆನಂತೀರಾ? ಫೇಸ್ ಬುಕ್ ಈಗ ತನ್ನ ಒಂದೇ ಆ್ಯಪ್ ಮೂಲಕ ವಾಟ್ಸಾಪ್, ಇನ್ಸ್ಟಾ ಗ್ರಾಂ ಮತ್ತು ಫೆಸ್ಬುಕ್ ಮೆಸೆಂಜರ್ ಗಳನ್ನು ಆಪರೇಟ್ ಮಾಡುವ ಆ್ಯಪ್ ನ್ನು ಸಿದ್ದಪಡಿಸುವ ಇರಾದೆಯನ್ನು ಹೊಂದಿದೆ. 


ಫೆಸ್ಬುಕ್ ಸಿಇಓ ಈಗ ಈ ಕುರಿತಾಗಿ ಯೋಜನೆಯನ್ನು ರೂಪಿಸುತ್ತಿದ್ದು. ಎಲ್ಲವು ಅಂದುಕೊಂಡಂತೆ ಆದಲ್ಲಿ ಮುಂಬರುವ ದಿನಗಳಲ್ಲಿ ಎಲ್ಲ ಖಾತೆಗಳನ್ನು ಒಂದೇ ಆ್ಯಪ್ ಮೂಲಕವೇ ನಿರ್ವಹಿಸಬಹುದಾಗಿದೆ. ವಾಟ್ಸಪ್ ನಲ್ಲಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ ಆಯ್ಕೆ ಮೂಲಕ ಇತರರು ನಮ್ಮ ಖಾತೆಗೆ ನೂಸುಳದಂತೆ ರಕ್ಷಣೆ ಇದೆ.ಈ ಕಾರಣಕ್ಕಾಗಿಯೇ ಅದು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಸಹಗಳಿಸಿದೆ.


ಈ ನೂತನವಾಗಿ ಬಿಡುಗಡೆಯಾಗುವ ಆ್ಯಪ್ ನಲ್ಲಿ ಪರಸ್ಪರ ಯಾವುದೇ ಖಾತೆಯಿಂದಲೂ ಕೂಡ ಮೆಸೇಜ್ ಗಳನ್ನು ಕಳುಹಿಸಬಹುದು.ಉದಾಹರಣೆಗೆ ಒಂದು ವೇಳೆ ನಿಮ್ಮದು ವಾಟ್ಸಪ್ ಖಾತೆ ಇದ್ದು ಆದರೆ ಫೆಸ್ ಬುಕ್ ಇಲ್ಲದಿದ್ದರೂ ಕೂಡ ನೀವು ಫೆಸ್ಬುಕ್ ಗೆ ಸಂದೇಶ ಕಳುಹಿಸಬಹುದು ಎನ್ನಲಾಗಿದೆ.


ಸಾಮಾಜಿಕ ಮಾಧ್ಯಮದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಿರುವ ಫೆಸ್ ಬುಕ್ ಈ ನಡೆಯ ಮೂಲಕ ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕ್ಷೀಪ್ರ ಕ್ರಾಂತಿಯಾಗಲಿದೆ ಎನ್ನಲಾಗುತ್ತಿದೆ.