ನವದೆಹಲಿ: ಪಾಕಿಸ್ತಾನದ ಪಿಟಿಐ ಪಕ್ಷದ ಮುಖ್ಯಸ್ಥ  ಇಮ್ರಾನ್ ಖಾನ್ ಪಿಎಂಎಲ್-ಎನ್ ಪಕ್ಷದವರನ್ನು ವ್ಯಂಗವಾಡುತ್ತಾ ನವಾಜ್ ಷರೀಫ್ ರನ್ನು ಬರ ಮಾಡಿಕೊಳ್ಳುವವರು ಕತ್ತೆಗಳು ಎಂದು ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ನರೋವಾಲ್ ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ " ಅದೇಗೆ ಮುಸ್ಲಿಂ ಲೀಗ್ ನಾಯಕರು  ವಿಮಾನ ನಿಲ್ದಾಣಕ್ಕೆ ಹೋಗಿ ನವಾಜ್ ಶರೀಫ್ ರನ್ನು ಬರಮಾಡಿಕೊಳ್ಳುತ್ತಾರೆ? ತಮ್ಮ ಮಕ್ಕಳಿಗೆ ಈ ದೇಶದ ಕೋಟ್ಯಾಂತರ ರೂಪಾಯಿಯನ್ನು ಲೂಟಿಹೊಡೆದ ಕಳ್ಳನನ್ನು ಸ್ವಾಗತಿಸಲು ಹೋಗಿದ್ದೆವು ಎಂದು ಹೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಯಾರಾದರೂ ಒಂದುವೇಳೆ ಅವರನ್ನು ಬರಮಾಡಿಕೊಳ್ಳಲು ಹೋಗಿದ್ದಾರೆ ಅವರೆಲ್ಲಾ ಕತ್ತೆಗಳು ಎಂದು ಅವರು ತಿಳಿಸಿದರು ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.


ಶರೀಫ್ ಕುಟುಂಬವನ್ನು ಟಿಕಿಸುತ್ತಾ" ತಂದೆ ಮಗಳು ಇಬ್ಬರು ಸೇರಿ ಪಾಕಿಸ್ತಾನದ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಾರೆ. ಆದರೆ ಈಗ ಅವರು ಕೈ ಬೀಸುತ್ತಾ  ದೇಶಕ್ಕೆ ಹಿಂತಿರುಗುತ್ತಿದ್ದಾರೆ ಅವರೆಲ್ಲಾ ಕಳ್ಳರು ಎಂದು ಇಮ್ರಾನ್ ಖಾನ್  ತಿಳಿಸಿದ್ದಾರೆ.