ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಅಪಹರಿಸಲಾಗಿದ್ದ ಮೂವರು ವಿದೇಶಿಯರನ್ನು ಬಂದೂಕುದಾರಿಗಳು ಗುರುವಾರ ಹತ್ಯೆ ಮಾಡಿದ್ದಾರೆ. ಹತ್ಯೆಗೀಡಾದವರಲ್ಲಿ ಓರ್ವ ಭಾರತೀಯ ನಾಗರೀಕ ಸಹ ಸೇರಿದ್ದಾರೆ ಎನ್ನಲಾಗಿದೆ. ಸ್ಥಳೀಯ ಟೋಲೋ ನ್ಯೂಸ್ ವರದಿಯಲ್ಲಿ ಗುರುವಾರ ಬೆಳಿಗ್ಗೆ ಓರ್ವ ಭಾರತೀಯ, ಮಲೇಷಿಯಾದ ಓರ್ವ ನಾಗರೀಕ ಮತ್ತು ಓರ್ವ ಮೆಸಿಡೋನಿಯನ್ ನಾಗರಿಕನನ್ನು ಅಪಹರಿಸಲಾಗಿದೆ ಎಂದು ಹೇಳಿದರು. ನಂತರ, ಕಾಬೂಲ್ ಪ್ರಾಂತ್ಯದ ಮುಸಹಹಿ ಜಿಲ್ಲೆಯಲ್ಲಿ ಅವರ ದೇಹ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಅವರನ್ನು ಕಾಬೂಲ್ನ PD9 ಎಂಬ ಪ್ರದೇಶದಿಂದ ಅಪಹರಿಸಲಾಗಿತ್ತು ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಈ ಘಟನೆಯನ್ನು ಪೊಲೀಸರು ದೃಢಪಡಿಸಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಆದರೆ, ಈ ವಿಷಯದ ಬಗೆಗಿನ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಹತ್ಯೆಗೀಡಾದ ಮೂವರು ಒಂದು ಫರ್ನಿಷರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಂಬಲಾಗಿದೆ. ಈವರೆಗೂ ಯಾವುದೇ ಭಯೋತ್ಪಾದಕ ಗುಂಪು ಈ ಘಟನೆಯ ಹೊಣೆ ಹೊತ್ತಿಲ್ಲ.