Three Giant Snakes Fall Through Ceiling: ಹಾವುಗಳಿಗೆ ಸಂಬಂಧಿಸಿದ ಅದೆಷ್ಟೋ ವಿಡಿಯೋಗಳನ್ನು ನಾವೆಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಕಂಡಿದ್ದೇವೆ. ಆದರೆ ಇಂದು ನಾವು ಹೇಳಹೊರಟಿರುವ ಸುದ್ದಿಯನ್ನು ಓದಿದರೆ ಮೈ ಜುಂ ಎನಿಸದಿರದು. ಅಷ್ಟೇ ಅಲ್ಲ, ಈ ಘಟನೆಯ ವಿಡಿಯೋ ನೋಡಬೇಕಾದರೆ ಹೃದಯ ಗಟ್ಟಿ ಮಾಡಿಕೊಳ್ಳುವುದು ಉತ್ತಮ. ಅಷ್ಟೊಂದು ಭಯಂಕರವಾಗಿದೆ.


COMMERCIAL BREAK
SCROLL TO CONTINUE READING

ವಿಡಿಯೋ ಕಂಡಾಗ ಎದೆಯಲ್ಲಿ ನಮಗೆ ತಿಳಿಯದಂತೆ ಭಯ ಆವರಿಸುತ್ತದೆ. ಈ ದೃಶ್ಯಗಳು ನಂಬಲಾಗದ ಕ್ಷಣವನ್ನು ತೋರಿಸಿದೆ. ಹೌದು ಹಾವಿನ ರಾಶಿಯೇ ಮನೆಯ ಛಾವಣಿಯಿಂದ ಕೆಳಬಿದ್ದಿವೆ.


ಇದನ್ನೂ ಓದಿ: Viral Video : ಇದ್ದಕ್ಕಿದ್ದಂತೆ ವಾಹನದ ಮೇಲೆ ಆನೆ ದಾಳಿ.! ಬಡಪಾಯಿ ಚಾಲಕನ ಪಾಡು ನೋಡಿ..


ಈ ಘಟನೆ ನಡೆದಿರುವುದು ಮಲೇಷ್ಯಾದಲ್ಲಿ. ಹೌದು ಇಲ್ಲಿನ ಮನೆಯಲ್ಲಿ ವಿಚಿತ್ರ ಶಬ್ದ ಕೇಳುತ್ತಿದೆ ಎಂದು ಭಾವಿಸಿ, ತುರ್ತು ಸಿಬ್ಬಂದಿಯನ್ನು ಕರೆಸಲಾಗಿದೆ. ಈ ವೇಳೆ ಕಾರ್ಯಾಚರಣೆ ನಡೆಸುವಾಗ ಭೀಕರ ದೃಶ್ಯವೊಂದು ಕಣ್ಣಿಗೆ ಬಿದ್ದಿದೆ.


ಟ್ವಿಟ್ಟರ್‌ನಲ್ಲಿನ ವೀಡಿಯೊದ ಪೋಸ್ಟ್‌ನಲ್ಲಿ "ರಾತ್ರಿ ಮಲಗುವಾಗ ತಮ್ಮ ಮನೆಯ ಮೇಲೆ ವಿಚಿತ್ರವಾದ ಶಬ್ದಗಳು ಕೇಳುತ್ತಿದ್ದವು. ಏನೆಂದು ಪರಿಶೀಲಿಸಿದಾಗ ದೈತ್ಯ ಸರೀಸೃಪಗಳು ಕಂಡುಬಂದಿವೆ. ಅವುಗಳನ್ನು ರಕ್ಷಿಸಿ ಹೊರಬಿಡಲಾಗಿದೆ” ಎಂದು ಹೇಳಿದ್ದಾರೆ.


BIG BREAKING: ದೆಹಲಿಯ BBC ಕಚೇರಿ ಮೇಲೆ ಐಟಿ ದಾಳಿ.!


ಈ ವಿಡಿಯೋ ಕಂಡು ಭಯಗೊಂಡ ಸೋಶಿಯಲ್ ಮೀಡಿಯಾ ಬಳಕೆದಾರರು ಚಿತ್ರ ವಿಚಿತ್ರ ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ "ಇಡೀ ಮನೆಗೆ ಬೆಂಕಿ ಹಚ್ಚಿ" ಎಂದು ಬರೆದಿದ್ದಾನೆ. ಮತ್ತೊಬ್ಬ, “ಇವುಗಳ ಬಾಧೆಯಿಂದ ನಾನು ಮಂಗಳ ಗ್ರಹಕ್ಕೆ ಹೋಗಬೇಕಾಗಿತ್ತು ”ಎಂದು ಹೇಳಿದ್ದಾನೆ. ಮೂರನೇ ವ್ಯಕ್ತಿ "ಇದು ದುಃಸ್ವಪ್ನದಂತೆ ಕಾಣಿಸುತ್ತಿದೆ" ಎಂದು ಹೇಳಿದ್ದಾನೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.