ಶಾಪಿಂಗ್ ಸೆಂಟರ್ನಲ್ಲಿ ಹುಲಿ ಕಂಡು ಬೆಚ್ಚಿಬಿದ್ದ ಪೊಲೀಸ್! ಮುಂದೆ...
ಶಾಪಿಂಗ್ ಸೆಂಟರ್ ನಲ್ಲಿ ಇತ್ತೀಚೆಗೆ ಹುಲಿಯೊಂದನ್ನು ಕಂಡ ಪೊಲೀಸ್ ಅಧಿಕಾರಿಯೊಬ್ಬರು ಭಯಭೀತರಾದ ಘಟನೆ ನಡೆದಿದೆ.
ಅಮೆರಿಕಾದ ವರ್ಜೀನಿಯಾದ ಶಾಪಿಂಗ್ ಸೆಂಟರ್ ನಲ್ಲಿ ಇತ್ತೀಚೆಗೆ ಹುಲಿಯೊಂದನ್ನು ಕಂಡ ಪೊಲೀಸ್ ಅಧಿಕಾರಿಯೊಬ್ಬರು ಭಯಭೀತರಾದ ಘಟನೆ ನಡೆದಿದೆ.
ಈ ವಿಷಯವನ್ನು ಪ್ರಿನ್ಸ್ ವಿಲಿಯಂ ಕೌಂಟಿ ಪೊಲೀಸ್ ಇಲಾಖೆ ಫೇಸ್ಬುಕ್ ನಲ್ಲಿ ಹುಲಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದು, "ನಮ್ಮ ಇಲಾಖೆಯ ಅಧಿಕಾರಿಯೊಬ್ಬರು ಬೆಚ್ಚಿ ಬೀಳುವಂತಹ ಒಂದು ಸನ್ನಿವೇಶವನ್ನು ಅನುಭವಿಸಿದ್ದಾರೆ. ಆ ಶಾಕ್'ನಿಂದ ಸಾವರಿಸಿಕೊಳ್ಳುವಷ್ಟರಲ್ಲಿ ಅದೊಂದು ತೊಂದರೆ ಮಾಡದ ಪ್ರಾಣಿ ಎಂಬುದು ಅರಿವಾಗಿದೆ" ಎಂದು ಅದರಲ್ಲಿ ಬರೆಯಲಾಗಿದೆ.
ಅಷ್ಟಕ್ಕೂ ಆ ಹುಲಿ ಯಾಕೆ ತೊಂದರೆ ನೀಡಲಿಲ್ಲ? ಎನ್ನುವ ಪ್ರಶ್ನೆ ನಿಮ್ಮನ್ನು ಈಗ ಕಾಡುತ್ತಿರಬಹುದು. ಅಷ್ಟಕ್ಕೂ ಅದು ನಿಜವಾದ ಹುಲಿ ಆಗಿರಲಿಲ್ಲ. ಅದೊಂದು ಹುಲಿಯ ಪ್ರತಿಮೆ ಎಂಬುದು ಆ ಪೋಲಿಸ್ ಅಧಿಕಾರಿಗೆ ತಡವಾಗಿ ಅರಿವಾಗಿತ್ತು. ಹಳೆಯದಾಗಿದ್ದ ಆ ಹುಲಿ ಸ್ಟ್ಯಾಚ್ಯೂವನ್ನು ಶಾಪಿಂಗ್ ಸೆಂಟರ್ ಹಿಂಬದಿಯಲ್ಲಿ ಇರಿಸಲಾಗಿತ್ತು. ರಾತ್ರಿ ಗಸ್ತಿನಲ್ಲಿದ್ದ ಪೋಲಿಸ್ ಅಧಿಕಾರಿ ಈ ಸ್ಟ್ಯಾಚ್ಯೂ ನೋಡಿ ಬೆಚ್ಚಿ ಬಿದ್ದಿದ್ದರು ಎನ್ನಲಾಗಿದೆ. ಸದ್ಯ ಈ ಫೋಟೋಗಳು ಫೇಸ್ಬುಕ್'ನಲ್ಲಿ ಸಖತ್ ವೈರಲ್ ಆಗಿದೆ.
ಇದೇ ಸಂದರ್ಭದಲ್ಲಿ ಹಳೆಯದಾದ ಪ್ರಾಣಿಗಳ ಸ್ಟ್ಯಾಚ್ಯೂಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಹಾಗೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಉದ್ಯಮಿಗಳಿಗೆ, ಶಾಪಿಂಗ್ ಸೆಂಟರ್ ಮಾಲೀಕಾರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.