ಅಮೇರಿಕಾದಲ್ಲಿ TikTok ಮೇಲೆ ನಿಷೇಧ, ಕಂಪನಿ ಹೇಳಿದ್ದೇನು ಗೊತ್ತಾ?
ಅಮೇರಿಕಾದಲ್ಲಿಯೂ ಕೂಡ TikTok ಮೇಲೆ ನಿಷೇಧ ವಿಧಿಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಪನಿ ತಾನು US ಬಿಡುವುದಿಲ್ಲ ಎಂದು ಹೇಳಿದೆ.
ನವದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಟಿಕ್ ಟಾಕ್ (TikTok) ನಿಷೇಧವಿಧಿಸಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ ತಾನು ಅಮೇರಿಕಾವನ್ನು ತೊರೆಯುವುದಿಲ್ಲ ಎಂದು ಹೇಳಿದೆ. ಈ ಆಪ್ ಮೇಲೆ ಬೇಹುಗಾರಿಕೆಯ ಶಂಕೆ ವ್ಯಕ್ತಪಡಿಸಿರುವ ಟ್ರಂಪ್ ಆಪ್ ಅನ್ನು ಬಂದ್ ಮಾಡಲು ಸೂಚಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಈ ಘೋಷಣೆಯ ಬಳಿಕ ಅಮೇರಿಕಾದಲ್ಲಿರುವ ಟಿಕ್ ಟಾಕ್ ಕಂಪನಿಯ ಜನರಲ್ ಮ್ಯಾನೇಜರ್ ವನೆಸಾ ಹೇಳಿಕೆ ನೀಡಲು ಮುಂದಕ್ಕೆ ಬಂದಿದ್ದಾರೆ. ಈ ಕುರಿತು ಬಳಕೆದಾರರಿಗೆ ಸಂದೇಶ ನೀಡಿರುವ ಅವರು, ತಮ್ಮ ಕಂಪನಿ ಬಳಕೆದಾರರಿಗೆ ಸುರಕ್ಷಿತ ಸೇವೆ ಒದಗಿಸಲು ಪ್ರತಿಬದ್ಧವಾಗಿದೆ. ಕಂಪನಿಯ ಮೇಲೆ ಬ್ಯಾನ್ ವಿಧಿಸಿರುವ ಕುರಿತು ಹೇಳಿಕೆ ನೀಡಿರುವ ಅವರು, ತಮ್ಮ ಕಂಪನಿ US ತೊರೆಯುವುದಿಲ್ಲ ಎಂದು ಹೇಳಿದ್ದಾರೆ.