ನವದೆಹಲಿ : ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ (Russia Ukraine war) ನಂತರ ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು, ತವರಿಗೆ ಮರಳುವ ಬಗ್ಗೆ  ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರೊಂದಿಗೆ ಉಕ್ರೇನ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ದೆಹಲಿಯ ಉಕ್ರೇನ್ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ.  ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ. ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲು ತುರ್ತು ಸೇವೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಉಕ್ರೇನ್ ವಾಯುಪ್ರದೇಶದಲ್ಲಿ ವಿಮಾನಗಳ ಹಾರಾಟ ನಿಷೇಧ : 
ಮಾಹಿತಿಯ ಪ್ರಕಾರ, ಈಶಾನ್ಯ ಉಕ್ರೇನ್‌ನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನು ನಿಷೇಧಿಸಲು NOTAM (notice to airmen)ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ (Ukraine)ತನ್ನ ವಾಯುಪ್ರದೇಶವನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಬೆಳಿಗ್ಗೆ 6.15 ರಿಂದ ಮುಚ್ಚುವಂತೆ ಸೂಚನೆ ನೀಡಿದೆ (Flight Ban).   ಈ ಕಾರಣದಿಂದಾಗಿ, ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆದೊಯ್ಯಲು ಹೋಗಿದ್ದ ಏರ್ ಇಂಡಿಯಾದ AI-1947 ವಿಮಾನ ಅರ್ಧದಿಂದಲೇ ಹಿಂದುರುಗಬೇಕಾಯಿತು (Air India Flight). 


ಇದನ್ನೂ ಓದಿ : WATCH:ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ಬಳಿಕ ಕೀವ್‌ನಲ್ಲಿ ಸೆರೆಯಾದ ಸ್ಫೋಟದ ದೃಶ್ಯ!


 ತುರ್ತು ಸೇವೆಗಳನ್ನು ಜಾರಿಗೊಳಿಸಲಿದೆ ಸರ್ಕಾರ :
ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತುರ್ತು ಸೇವೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ವಾಯುಪ್ರದೇಶವನ್ನು ಮುಚ್ಚಿರುವ ಕಾರಣದಿಂದ ಪರ್ಯಾಯ ಮಾರ್ಗಗಳನ್ನು ಪರಿಗಣಿಸಲಾಗುತ್ತಿದೆ. ಇದಲ್ಲದೆ, ರಷ್ಯಾ (Russia)ಮಾತನಾಡುವ ಅಧಿಕಾರಿಗಳನ್ನು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ.  ಮತ್ತು ಭಾರತೀಯರನ್ನು ಉಕ್ರೇನ್‌ನ ನೆರೆಯ ದೇಶಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಚೇರಿ ಉಕ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ಅಲ್ಲಿ ಸಿಕ್ಕಿಹಾಕಿಕೊಂಡಿರುವ  ಭಾರತೀಯ ವಿದ್ಯಾರ್ಥಿಗಳಿಗೆ  ಮನವಿ ಮಾಡಲಾಗಿದೆ.


ಇದನ್ನೂ ಓದಿ : Life Recall:ಮನುಷ್ಯ ಸಾಯುವ ಕೊನೆಯ ಕ್ಷಣ ಹೇಗಿರುತ್ತಾರೆ ಗೊತ್ತಾ? ಮೆದುಳಿನಲ್ಲಿ ನಡೆಯುತ್ತೆ ವಿಸ್ಮಯ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ