ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ ಶೀಘ್ರದಲ್ಲಿಯೇ ಬಾಹ್ಯಾಕಾಶದ ಶೂಟಿಂಗ್ ವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ NASA ಕೂಡ ಈ ಸುದ್ದಿಯನ್ನು ಧೃಢಪಡಿಸಿದೆ. ಟಾಮ್ ಕ್ರೂಸ್, ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಹಾಗೂ NASA ಜೊತೆಗೆ ಸೇರಿ ಬಾಹ್ಯಾಕಾಶದ ಚಿತ್ರವೊಂದರ ಮೇಲೆ ಕೆಲಸ ಮಾಡುತ್ತಿದ್ದು, ಅದರ ಚಿತ್ರೀಕರಣ ಬಾಹ್ಯಾಕಾಶದಲ್ಲಿ ನಡೆಸಲಾಗುವುದು ಎಂದು NASA  ಆಡಳಿತ ಅಧಿಕಾರಿ ಜಿಮ್ ಟ್ವೀಟ್ ಮಾಡುವ ಮೂಲಕ ಸುದ್ದಿಯನ್ನು ದೃಢಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

"ನಾಸಾ ಟಾಮ್ ಕ್ರೂಸ್ ಜೊತೆ ಸೇರಿ ಅವರ ಮುಂದಿನ ಚಿತ್ರದ ಶೂಟಿಂಗ್ ಅನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಆಡಲು ಅತೀವ ಉತ್ಸುಕವಾಗಿದೆ" ಎಂದು ಜಿಮ್ ತನ್ನ ಟ್ವೀಟ್ ನಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ನಾಸಾ ಪ್ರಸ್ತುತ ಯೋಜನೆಯನ್ನು ಪೂರ್ಣಗೊಳಿಸಲು ಕಾರ್ಯಪ್ರವೃತ್ತವಾಗಿದ್ದು, ಹೊಸ ತಲೆಮಾರಿನ ಜನರು, ಇಂಜಿನಿಯರ್ ಹಾಗೂ ವಿಜ್ಞಾನಿಗಳು ಈ ಕನಸನ್ನು ಈಡೇರಿಸಲಿದ್ದಾರೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ನೆಲಿದ್ದಾರೆ.



ಈ ಚಿತ್ರದಲ್ಲಿ ನಟಿಸುವ ಮೂಲಕ ಬಾಹ್ಯಾಕಾಶದಲ್ಲಿ ಶೂಟಿಂಗ್ ನಡೆಸಿದ ಮೊದಲ ನಟ ಎಂಬ್ಬ ಹೆಗ್ಗಳಿಕೆಗೆ ಟಾಮ್ ಕ್ರೂಸ್ ಕೂಡ ಪಾತ್ರರಾಗಲಿದ್ದಾರೆ. ಅಷ್ಟೇ ಅಲ್ಲ ಬಾಹ್ಯಾಕಾಶದ ಬಗ್ಗೆ ಮತ್ತು ಬಾಹ್ಯಾಕಾಶದಲ್ಲಿಯೇ ಚಿತ್ರೀಕರಣಗೊಂಡ ಮೊದಲ ಚಿತ್ರ ಕೂಡ ಇದಾಗಿರಲಿದೆ.


ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ, ಆದರೆ ಇದು ಬಹಳ ದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದೇ ಹೇಳಲಾಗುತ್ತಿದೆ. ಎಲೋನ್ ಮಸ್ಕ್ ಕೂಡ ಈ ಚಿತ್ರದೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ನಾಸಾ ಮಾಡಿದ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಎಲೋನ್ ಮಸ್ಕ್ ಇದು ತುಂಬಾ ಖುಷಿಯ ಕೊಡಲಿದೆ ಎಂದು ಬರೆದಿದ್ದಾರೆ.


ಸದ್ಯ ನಾಸಾ ಮತ್ತು ಸ್ಪೇಸ್ ಎಕ್ಸ್ ಈ ಚಿತ್ರದ ಚಿತ್ರೀಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಚಿತ್ರದ ಶೂಟಿಂಗ್ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಇನ್ನೂ ಘೋಷಿಸಲಾಗಿಲ್ಲ.