Trump Immigration Plan: ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷರಾದರೆ ಭಾರತಕ್ಕೆ ಏನು ಲಾಭ?
Trump Bold Immigration Plan: ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಗೆಲುವಿನ ವಿಶ್ವಾಸವಿದೆ. ಹೀಗಿರುವಾಗ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧಿಕಾರ ವಹಿಸಿಕೊಂಡರೆ ಅದರಿಂದ ಭಾರತಕ್ಕೆ ಆಗುವ ಲಾಭವೇನು, ವಲಸೆಗೆ ಸಂಬಂಧಿಸಿದಂತೆ ಅವರ ಅಜೆಂಡಾ ಏನು ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ.
Trump Bold Immigration Plan: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಇಬ್ಬರೂ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಟ್ರಂಪ್‌ಗೆ ಮತ್ತೊಮ್ಮೆ ಗೆಲುವಿನ ವಿಶ್ವಾಸವಿದೆ. ಕಳೆದ ಚುನಾವಣೆಯಲ್ಲಿ ಟ್ರಂಪ್ ಭಾರತೀಯರಿಂದ ಸಾಕಷ್ಟು ಮತಗಳನ್ನು ಪಡೆದಿದ್ದರು. ಆದ್ದರಿಂದಲೇ ಭಾರತಕ್ಕೆ ಶ್ವೇತಭವನದಲ್ಲಿ ತನಗಿಂತ ಉತ್ತಮ ಅಧ್ಯಕ್ಷರು ಸಿಗಲಾರರು ಎಂದು ಅವರು ಹೇಳಿಕೊಂಡಿದ್ದಾರೆ. ಹಾಗಾದರೆ ಟ್ರಂಪ್ ಅಧ್ಯಕ್ಷರಾದರೆ ಭಾರತಕ್ಕೆ ಏನು ಲಾಭ? ವಲಸೆಗೆ ಸಂಬಂಧಿಸಿದಂತೆ ಅವರ ಯೋಜನೆ ಏನು ಎಂದು ತಿಳಿಯಿರಿ.
ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾದರೆ ಭಾರತಕ್ಕೆ ಏನು ಲಾಭ?
ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್, ಭಾರತಕ್ಕೆ ಸಂಬಂಧಿಸಿದಂತೆ ತಮ್ಮ ಯೋಜನೆಯನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿಯೇ ಟ್ರಂಪ್‌ಗೆ ಮತ್ತೊಮ್ಮೆ ಅಧ್ಯಕ್ಷರಾಗುವ ಅವಕಾಶ ಸಿಕ್ಕರೆ, ಅವರು ಭಾರತದ ಬಗ್ಗೆ ಯಾವ ಯೋಜನೆಗಳನ್ನು ಹೊಂದಿದ್ದಾರೆಂದು ಪ್ರಶ್ನಿಸಲಾಗಿತ್ತು? ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಭಾರತೀಯ ಅಮೆರಿಕನ್ನರು ತಮ್ಮ ಕಟ್ಟಾ ಬೆಂಬಲಿಗರೆಂದು ಧೈರ್ಯವಾಗಿ ಹೇಳಿದ್ದಾರೆ. ಹಾಗಾಗಿಯೇ ಕಳೆದ ಚುನಾವಣೆಯಲ್ಲೂ ಅವರಿಗೆ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಶ್ವೇತಭವನದಲ್ಲಿ ಅಧ್ಯಕ್ಷರಾಗಿ ಭಾರತೀಯರಿಗೆ ನನಗಿಂತ ಉತ್ತಮ ಸ್ನೇಹಿತ ಸಿಗುವುದಿಲ್ಲವೆಂದು ನಾನು ಖಾತರಿಪಡಿಸುತ್ತೇನೆಂದು ಸ್ವತಃ ಟ್ರಂಪ್ ಹೇಳಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಹಳ ಸಮಯದಿಂದ ಬಲ್ಲೆ, ಅವರ ನಾಯಕತ್ವದಲ್ಲಿ ಭಾರತ ಮುನ್ನಡೆಯುತ್ತಿದೆ. ನನ್ನ ೨ನೇ ಇನ್ನಿಂಗ್ಸ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ ಅಂತಾ ಹೇಳಿದ್ದಾರೆ.
ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾದರೆ ಅಮೆರಿಕಕ್ಕೆ ಬರುವವರಿಗೆ ಮತ್ತು ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಕಷ್ಟಗಳು ಹೆಚ್ಚಾಗಬಹುದೆಂಬ ಅನುಮಾನ ಜಗತ್ತಿನಾದ್ಯಂತ ಇದೆಯಾದರೂ ವಲಸೆಯೇ ದೊಡ್ಡ ಸಮಸ್ಯೆಯಾಗಿದೆ. ವೀಸಾ ನಿಯಮಗಳು ಇನ್ನಷ್ಟು ಕಠಿಣವಾಗಬಹುದು. ಟ್ರಂಪ್ ಅವರು 'ಮೆರಿಟ್ ಆಧಾರಿತ ವಲಸೆ'ಗೆ ಒತ್ತು ನೀಡುತ್ತಾರೆ, ಅಂದರೆ ಹೆಚ್ಚು ಶಿಕ್ಷಣ ಪಡೆದವರು ಅಥವಾ ವಿಶೇಷ ಕೌಶಲ್ಯ ಹೊಂದಿರುವವರು ಮಾತ್ರ ಅಮೆರಿಕಕ್ಕೆ ಬರಲು ಅವಕಾಶವನ್ನು ಪಡೆಯುತ್ತಾರೆ. ವೀಸಾ ನಿಯಮಗಳು ಕಟ್ಟುನಿಟ್ಟಾಗಿರುತ್ತವೆ ಮತ್ತು ಕುಟುಂಬದೊಂದಿಗೆ ಬರುವ ಆಧಾರದ ಮೇಲೆ ಅಥವಾ ಉದ್ಯೋಗದ ಆಧಾರದ ಮೇಲೆ ಲಭ್ಯವಿರುವ ವೀಸಾಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.
ವಲಸೆಗೆ ಸಂಬಂಧಿಸಿದಂತೆ ಭಾರತದ ಬಗ್ಗೆ ಟ್ರಂಪ್ ಅಭಿಪ್ರಾಯವೇನು?
ಟ್ರಂಪ್ ಭಾರತದ ಬಗ್ಗೆ ತಮ್ಮದೇಯಾದ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಅಕ್ರಮ ವಲಸೆಯ ಬಗ್ಗೆ ತಾನು ಬಲವಾದ ನಿಲುವು ಹೊಂದಿದ್ದೇನೆಂದು ಟ್ರಂಪ್ ಸಂದರ್ಶನದಲ್ಲಿ ಹೇಳುತ್ತಾರೆ. ಅಧ್ಯಕ್ಷನಾಗಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇನೆ. ಆದರೆ ನಾನು ಕಾನೂನು ವಲಸಿಗರನ್ನು ವಿಶೇಷವಾಗಿ ಭಾರತೀಯರನ್ನು ಸ್ವಾಗತಿಸುತ್ತೇನೆಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಅಮೆರಿಕದಲ್ಲಿ ಪದವಿ ಪಡೆಯುವ ಭಾರತೀಯರು ಮತ್ತು ಇತರ ವಿದೇಶಿ ವಿದ್ಯಾರ್ಥಿಗಳು ಸ್ವಯಂಚಾಲಿತ ಮಾರ್ಗದ ಮೂಲಕ ಗ್ರೀನ್ ಕಾರ್ಡ್‌ಗಳನ್ನು ಪಡೆಯಬೇಕೆಂದು ನಾನು ಇತ್ತೀಚೆಗೆ ಹೇಳಿದ್ದೇನೆ. ಅದೇನೆಂದರೆ ಓದು ಮುಗಿದ ನಂತರ ಅಮೆರಿಕದಲ್ಲಿ ಖಾಯಂ ಆಗಿ ನೆಲೆಯೂರಲು ಎಲ್ಲ ಸೌಲಭ್ಯಗಳೂ ಸಿಗಬೇಕು ಅಂತಾ ತಿಳಿಸಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ರೆ ಹೊಸ ಮುಖ್ಯಮಂತ್ರಿ ಯಾರು?
ಭಾರತೀಯ ವಿದ್ಯಾರ್ಥಿಗಳಿಗೆ ಲಾಭವೇ?
ಹಾರ್ವರ್ಡ್ ಮತ್ತು ಎಂಐಟಿಯ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ತಮ್ಮ ದೇಶಕ್ಕೆ ಮರಳುತ್ತಾರೆಂದು ಟ್ರಂಪ್ ಸಂದರ್ಶನದಲ್ಲಿ ಹೇಳಿದ್ದಾರೆ. ಇದು ಅಮೆರಿಕಕ್ಕೆ ದೊಡ್ಡ ನಷ್ಟ. ಆದ್ದರಿಂದ ಪದವಿ ಮುಗಿಸಿದವರಿಗೆ ಗ್ರೀನ್ ಕಾರ್ಡ್ ನೀಡುವ ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದೇನೆ. ನನ್ನ ಯೋಜನೆಯು ಪದವಿ ಹೊಂದಿರುವವರು ಮತ್ತು ನುರಿತ ಕೆಲಸಗಾರರಿಗೆ ತೆರೆದ ಬಾಗಿಲು ನೀತಿಯಾಗಿದೆ. ಇದು ಇತರ ಅಮೇರಿಕನ್ ಕಾರ್ಮಿಕರ ಉದ್ಯೋಗಗಳಿಗೆ ಕತ್ತರಿ ಹಾಕುವುದಿಲ್ಲ. ಇದರಿಂದ ಭಾರತೀಯ ಪ್ರತಿಭಾನ್ವಿತರಿಗೆ ದೊಡ್ಡ ಲಾಭವಾಲಿದೆ ಎಂದು ಅವರು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.