ಶೀಘ್ರದಲ್ಲಿಯೇ Twitter ಬಳಕೆದಾರರು Tweetಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಬಹುದು
ಶೀಘ್ರದಲ್ಲಿಯೇ Twitter ಬಳಕೆದಾರರು Tweetಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಬಹುದು. ಇದಕ್ಕಾಗಿ ಅವರು ಹೆಚ್ಚು ಶ್ರಮಿಸಬೇಕಾಗಿಲ್ಲ. ವಾಸ್ತವವಾಗಿ ಟ್ವಿಟರ್ ಶೀಘ್ರದಲ್ಲೇ ನೂತನ ವೈಶಿಷ್ಟ್ಯವೊಂದನ್ನು ಸೇರಿಸಲು ಹೊರಟಿದೆ, ಇದರಲ್ಲಿ ಎಲ್ಲಾ ಟ್ವೀಟ್ಗಳನ್ನು ಸ್ವಯಂಚಾಲಿತವಾಗಿ ಅನುವಾದಿಸಲಾಗುತ್ತದೆ. ಟ್ವಿಟರ್ ಇದನ್ನು ಕೆಲವು ಬಳಕೆದಾರರ ಗುಂಪುಗಳ ಮೇಲೆ ಬ್ರೆಜಿಲ್ನಲ್ಲಿ ಪರೀಕ್ಷಿಸುತ್ತಿದೆ.
ಸ್ಯಾನ್ಫ್ರಾನ್ಸಿಸ್ಕೋ: Twitter ಬಳಕೆದಾರರು ಶೀಘ್ರದಲ್ಲಿಯೇ ಎಲ್ಲಾ Tweetಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಬಹುದಾಗಿದೆ. ಇದಕ್ಕಾಗಿ ಅವರು ಯಾವುದೇ ಹೆಚ್ಚಿನ ಶ್ರಮ ಪಡಬೇಕಾಗಿಲ್ಲ. ವಿಷಯ ಎಂದು ಅಂದ್ರೆ, ಟ್ವಿಟ್ಟರ್ ಶೀಘ್ರದಲ್ಲಿಯೇ ತನ್ನ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಲಿದ್ದು, ಈ ವೈಶಿಷ್ಟ್ಯದಲ್ಲಿ ಟ್ವೀಟ್ ಗಳು ಸ್ವಯಂಚಾಲಿತ ಆಗಿ ಭಾಷಾಂತರಗೊಳ್ಳಲಿವೆ. ಬ್ರಜಿಲ್ ನಲ್ಲಿನ ಕೆಲ ಬಳಕೆದಾರರ ಗುಂಪುಗಳ ಮೇಲೆ ಟ್ವಿಟ್ಟರ್ ತನ್ನ ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇವರಲ್ಲಿ ಅಂಡ್ರಾಯಿಡ್ ಹಾಗೂ ಐಓಎಸ್ ಎರಡೂ ಪ್ಲಾಟ್ಫಾರ್ಮ್ ಬಳಕೆದಾರರು ಶಾಮೀಲಾಗಿದ್ದಾರೆ. ಈ ವೈಶಿಷ್ಟ್ಯದ ಮೂಲಕ ಟ್ವಿಟ್ಟರ್ ಬಳಕೆದಾರರು ತಮ್ಮ ನೆಚ್ಚಿನ ಭಾಷೆಯಲ್ಲಿ ಟ್ವೀಟೋಕ್ತಿಗಳನ್ನು ಓದಬಹುದಾಗಿದೆ ಹಾಗೂ ತಾವು ಹಿಂಬಾಲಿಸುತ್ತಿರುವ ನೆಚ್ಚಿನ ವ್ಯಕ್ತಿಗಳ ಟ್ವೀಟ್ ಗಳನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು.
ಆದರೆ, ಟ್ವಿಟ್ಟರ್ ಮೇಲೆ ಟ್ರಾನ್ಸ್ಲೇಷನ್ ವಿಕಲ್ಪ ಈ ಹಿಂದಿನಿಂದಲೂ ಕೂಡ ಲಭ್ಯವಿದೆ. ಆದರೆ, ಈ ವಿಕಲ್ಪ ಸ್ವಯಂಚಾಲಿತವಾಗಿರಲಿಲ್ಲ. ಇಂದಿಗೂ ಕೂಡ ಈ ಪ್ಲಾಟ್ಫಾರ್ಮ್ ಇನ್ ಲೈನ್ ಟ್ರಾನ್ಸ್ಲೇಷನ್ ಗೆ ನೆರವು ನೀಡುತ್ತದೆ. ಅಂದರೆ, ಬಳಕೆದಾರರು ಬೇರೆ ಭಾಷೆಗಳಲ್ಲಿ ಬಂದ ಟ್ವೀಟ್ ಗಳನ್ನು ತಮ್ಮ ಭಾಷೆಗೆ ಟ್ರಾನ್ಸ್ಲೆಟ್ ಮಾಡಲು ಆಯ್ಕೆಯನ್ನು ಕ್ಲಿಕ್ಕಿಸಬೇಕಾಗುತ್ತದೆ. ಒಂದು ವೇಳೆ ಟ್ವಿಟ್ಟರ್ ಬಳಕೆದಾರ ತನ್ನ ಪ್ರೈಮರಿ ಭಾಷೆಯನ್ನೂ ಇಂಗ್ಲಿಷ್ ಎಂದು ಆಯ್ಕೆ ಮಾಡಿದ್ದರೆ, ಉಳಿದ ಎಲ್ಲ ಭಾಷೆಗಳ ವಿಕಲ್ಪಗಳನ್ನು ನೀಡಲಾಗುತ್ತದೆ. ಆದರೆ ಟ್ವಿಟ್ಟರ್ ಜಾರಿಗೊಳಿಸುತ್ತಿರುವ ನೂತನ ವೈಶಿಷ್ಟ್ಯದ ಮೂಲಕ ಬ್ರೆಜಿಲ್ ಬಳಕೆದಾರರು ಇಂಗ್ಲಿಷ್ ನಲ್ಲಿರುವ ಟ್ವೀಟ್ ಗಳನ್ನು ಪೋರ್ಚುಗೀಸ್ ಭಾಷೆಯಲ್ಲಿ ಓದಬಹುದಾಗಿದೆ. ಟ್ವೀಟ್ ಗಳನ್ನು ಭಾಷಾಂತರಗೊಳಿಸಲು ಅವರಿಗೆ ಸೆಟ್ಟಿಂಗ್ಸ್ ಗೆ ಹೋಗಿ ಮ್ಯಾನುಯೆಲ್ ಸೆಟ್ಟಿಂಗ್ ಮಾಡುವ ಅವಶ್ಯಕತೆ ಇಲ್ಲ.
ಈ ನೂತನ ವೈಶಿಷ್ಟ್ಯ ಕೂಡ ಶೀಘ್ರದಲ್ಲಿಯೇ ಟ್ವಿಟ್ಟರ್ ಸೇರಲಿದೆ
ಇದಲ್ಲದೆ, ಟ್ವಿಟರ್ ತನ್ನ ಬಳಕೆದಾರರಿಗೆ ಉಪಯುಕ್ತವಾಗಿರುವ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಈ ವೈಶಿಷ್ಟ್ಯ ಬಳಸಿ ಬಳಕೆದಾರರು ರೀಟ್ವೀಟ್ ಗಳನ್ನು Quotesಗಳ ಮೂಲಕ ನೋಡಬಹುದಾಗಿದೆ. ಇದಕ್ಕೂ ಮೊದಲು ಬಳಕೆದಾರರು ಇವುಗಳನ್ನು 'Retweets With Comments' ರೂಪದಲ್ಲಿ ಬಳಸುತ್ತಿದ್ದರು. ನೂತನ ವೈಶಿಷ್ಟ್ಯದಲ್ಲಿ ಟ್ವೀಟ್ ಕೆಳಗೆ ಕಂಡು ಬರುವ 'Quote Retweets'ಗಳು ಇದೀಗ 'Quotes' ರೂಪದಲ್ಲಿ ಕಾಣಿಸಿಕೊಳ್ಳಲಿವೆ. ಅಂದರೆ, ಇನ್ಮುಂದೆ ಅವು Retweets ಹಾಗೂ Likes ರೂಪದಲ್ಲಿ ಕಾಣಿಸಲಿವೆ.