ಕಾಬುಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟದಿಂದಾಗಿ ರು ಅಫಘಾನ್ ಪತ್ರಕರ್ತರು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಮತ್ತು 70 ಮಂದಿ ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಪೋಟಿಸಿಕೊಂಡಿದ್ದು, ಈ ಘಟನೆ ನಡೆದು ಒಂದು ಗಂಟೆಯ ಕಾರೊಂದರಲ್ಲಿ ಇಡಲಾಗಿದ್ದ ಬಾಂಬ್ ಸ್ಪೋಟಿಸಿದೆ ಎಂದು ಪೋಲಿಸ್ ವಕ್ತಾರ ಹಶ್ಮಾತ್ ಸ್ಟಾನಿಕ್ಜಾಯ್ ತಿಳಿಸಿದ್ದಾರೆ. ಎರಡನೇ ಸ್ಫೋಟದಲ್ಲಿ ಕನಿಷ್ಠ ನಾಲ್ಕು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ಸಂಘಟನೆಯ ಒಂದು ಗುಂಪು ಎನ್ಐಎಗೆ ತಿಳಿಸಿದರು.


ಈ  ಬಗ್ಗೆ ಮಾಹಿತಿ ನೀಡಿರುವ ಆಫ್ಘಾನಿಸ್ತಾನ ಆಂತರಿಕ ಇಲಾಖೆಯ ವಕ್ತಾರ ನಜೀಬ್‌ ಡ್ಯಾನಿಷ್‌ ಅವರು, 'ಮೊದಲ ಬಾರಿಗೆ ಆತ್ಮಾಹುತಿ ಬಾಂಬರ್ ನಿಂದ ಸ್ಫೋಟ ಸಂಭವಿಸಿದ್ದು, ಸ್ವಲ್ಪ ಸಮಯದ ನಂತರ ಕಾರ್‌ ಬಾಂಬ್‌ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ. ಅಂತೆಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಕ್ಯಾಮರಾಮನ್‌ ಮತ್ತು ರಿಪೋರ್ಟರ್‌ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.


ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ಪ್ರಸಾರಕ ಟೋಲೊ ನ್ಯೂಸ್ ಇಬ್ಬರು ಪತ್ರಕರ್ತರೂ ಮೃತಪಟ್ಟಿರುವುದಾಗಿ ಹೇಳಿದೆ. ಯುಎಸ್ ಮೂಲದ ಎಸ್ಐಟಿಇ ಗುಪ್ತಚರ ಗುಂಪು ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಈ ಅವಳಿ ಬಾಂಬ್ ಸ್ಪೋಟದ ಜವಾಬ್ದಾರಿ ವಹಿಸಿದೆ ಎಂದು ಚಾನೆಲ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯವನ್ನು ISIS ಹೆಚ್ಚಾಗಿ ಗುರಿಪಡಿಸುತ್ತಿದೆ.