ಇಬ್ಬರು `ರಾಯ್ಟರ್ಸ್` ಪತ್ರಕರ್ತರಿಗೆ ಜೈಲು
ರಾಯ್ಟರ್ಸ್`ನ ಇಬ್ಬರು ಪತ್ರಕರ್ತರನ್ನು ಅಪರಾಧಿಗಳೆಂದು ಘೋಷಿಸಿರುವ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಯಂಗಾನ್: ಸರ್ಕಾರಿ ರಹಸ್ಯ ಕಾಯದೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ರಾಯ್ಟರ್ಸ್'ನ ಇಬ್ಬರು ಪತ್ರಕರ್ತರನ್ನು ಅಪರಾಧಿಗಳೆಂದು ಘೋಷಿಸಿರುವ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸರ್ಕಾರಿ ರಹಸ್ಯ ಕಾಯದೆಗಳನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಮಾಯನ್ಮಾರ್ ಸರ್ಕಾರ ರಾಯ್ಟರ್ಸ್ ಪತ್ರಕರ್ತರಾದ ವಾ ಲೋನ್ (32) ಮತ್ತು ಕ್ಯಾವ್ ಸೋ (28) ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.
"ಈ ಅಪರಾಧಿಗಳು ಸರ್ಕಾರಿ ರಹಸ್ಯ ಕಾಯ್ದೆ 3.1.c ಅನ್ನು ಉಲ್ಲಂಘಿಸಿದ್ಧು, ಇವರಿಗೆ 7 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಡಿಸೆಂಬರ್ 12 ರಿಂದ ಪ್ರತಿವಾದಿಗಳು ಸಲ್ಲಿಸಿದ ಸಮಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು" ಯಂಗಾನ್ ಉತ್ತರ ಜಿಲ್ಲೆ ನ್ಯಾಯಾಧೀಶ ಯೇ ಲ್ವಿನ್ ತಿಳಿಸಿದ್ದಾರೆ.