ಟೋಕಿಯೋ: 25 ವರ್ಷಗಳಲ್ಲೇ ಅತ್ಯಂತ ಪ್ರಬಲವಾದ ಬಿರುಗಾಳಿಯನ್ನು ಜಪಾನ್ ಮಂಗಳವಾರ ಕಂಡಿದೆ. ದೇಶದ ಹವಾಮಾನ ಸಂಸ್ಥೆ ಪ್ರಬಲವಾದ ಬಿರುಗಾಳಿ ಮತ್ತು ಭಾರೀ ಮಳೆ ಎಚ್ಚರಿಕೆ ನೀಡಿದೆ. ಸೈಕ್ಲೋನಿಕ್ ಸ್ಟಾರ್ಮ್ ಪಶ್ಚಿಮ ಜಪಾನ್‌ನಲ್ಲಿ ಮಧ್ಯಾಹ್ನ ಗಂಟೆಗೆ 216 ಕಿಲೋಮೀಟರುಗಳಷ್ಟು ಕಂಡು ಬಂದಿದೆ. ಈ ವರ್ಷ ಬೇಸಿಗೆಯಲ್ಲಿ ತೀವ್ರವಾದ ಮಳೆಯಿಂದ ತತ್ತರಿಸಿದ್ದ ಈ ಪ್ರದೇಶವು ಇತ್ತೀಚೆಗಷ್ಟೇ ಚೇತರಿಸಿಕೊಂಡಿದೆ.



COMMERCIAL BREAK
SCROLL TO CONTINUE READING

ಪ್ರಧಾನಮಂತ್ರಿ ಶಿಂಜೊ ಅಬೆ ಅವರು ಸಾಧ್ಯವಾದಷ್ಟು ಬೇಗ ಜನರನ್ನು ಸ್ಥಳಾಂತರಿಸಬೇಕೆಂದು ಸೂಚಿಸಿದ್ದು, ನಿವಾಸಿಗಳ ರಕ್ಷಣೆಗಾಗಿ  ತಮ್ಮ ಸರಕಾರದಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಜಪಾನ್ ನ ಹವಾಮಾನ ಏಜೆನ್ಸಿಯು ಪಶ್ಚಿಮ ಜಪಾನ್ನಲ್ಲಿ ಹೆಚ್ಚಿನ ಅಲೆಗಳು, ಮಿಂಚು ಮತ್ತು ಚಂಡಮಾರುತದ ಎಚ್ಚರಿಕೆಗಳನ್ನು ನೀಡಿದೆ. ಜೊತೆಗೆ ಒಸಾಕಾ ಮತ್ತು ಕ್ಯೋಟೋ ನಗರಗಳಲ್ಲಿ ಭೂಕುಸಿತ, ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ.




ಈ ಪ್ರದೇಶದಲ್ಲಿ 1993 ರಿಂದೀಚೆಗೆ ಉಂಟಾಗುತ್ತಿರುವ ಭೀಕರ ಬಿರುಗಾಳಿ ಇದಾಗಿದೆ.