ನವದೆಹಲಿ: ಬ್ರಿಟನ್ ನಲ್ಲಿ ಜನಸಾಮಾನ್ಯರಿಗೆ ಕೊರೊನಾ ವ್ಯಾಕ್ಸಿನ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.  ಕರೋನಾ ಲಸಿಕೆ ತಯಾರಿಸುವ ಫೈಜರ್ ಎಂಬ ಕಂಪನಿಗೆ ಲಸಿಕೆ ನೀಡಲು ಸರ್ಕಾರ ಅನುಮತಿ ನೀಡಿದೆ. ಆದರೆ ಈಗ ಯುಕೆ ಸರ್ಕಾರದ ಮುಂದೆ ಹೊಸ ಸಮಸ್ಯೆ ಉದ್ಭವಿಸಿದೆ. ಕರೋನಾ ಲಸಿಕೆ ಅನ್ವಯಿಸಿದ ನಂತರ ಇಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಹೀಗಾಗಿ ಇದೀಗ ಸರ್ಕಾರವು ಈಗ ಫೈಜರ್ ಕರೋನಾ ಲಸಿಕೆ ಬಗ್ಗೆ ಮುನ್ನೆಚ್ಚರಿಕೆ ಸಲಹೆಯನ್ನು ಜಾರಿಗೊಳಿಸಿದೆ.


COMMERCIAL BREAK
SCROLL TO CONTINUE READING

ಇಬ್ಬರಲ್ಲಿ ಕಾಣಿಸಿಕೊಂಡ ವ್ಯಾಕ್ಸಿನ್ ಸೈಡ್ ಎಫೆಕ್ಟ್ 
ಡೆಲಿ ಮೇಲ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಅನಾರೋಗ್ಯಕ್ಕೆ ತುತ್ತಾಗಿರುವ ಇಬ್ಬರೂ ಕೂಡ ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಹಾಗೂ ವ್ಯಾಕ್ಸಿನ್ ಪ್ರಯೋಗದಿಂದ ಅವರಲ್ಲಿ ಅಲರ್ಜಿ ಲಕ್ಷಣಗಳು ಕಾಣಿಸಿಕೊಂಡಿವೆ. ಬ್ರಿಟನ್ ನ ನ್ಯಾಷನಲ್ ಹೆಲ್ತ್ ಸರ್ವಿಸ್ ಕೂಡ ಇದನ್ನು ಪುಷ್ಟಿಕರಿಸಿದೆ.
Pfizer Vaccine) ನೀಡಬಾರದು' ಎಂದು ಹೇಳಿದೆ.


ಚಿಕಿತ್ಸೆಯ ಬಳಿಕ ಶೀಘ್ರ ಗುಣಮುಖರಾಗುತ್ತಿದ್ದಾರೆ ರೋಗಿಗಳು
ಇದೇ ವೇಳೆ ಲಸಿಕೆಯ ಅಲರ್ಜಿಯಿಂದ ಬಳಲುತ್ತಿರುವ ಇಬ್ಬರೂ ಸರಿಯಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎನ್ಎಚ್ಎಸ್ನ ರಾಷ್ಟ್ರೀಯ ವೈದ್ಯಕೀಯ ನಿರ್ದೇಶಕ ಪ್ರೊಫೆಸರ್ ಸ್ಟೀಫನ್ ಪೋವಿಸ್ ಹೇಳಿದ್ದಾರೆ. ಇಬ್ಬರಿಗೂ ಅಲರ್ಜಿಯ ಇತಿಹಾಸವಿದೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- ಭಾರತದಲ್ಲಿ Pfizer ಕೊರೊನಾ ಲಸಿಕೆ ಸಿಗುತ್ತಾ..?


ಜನಸಾಮಾನ್ಯರಿಗೆ ವ್ಯಾಕ್ಸಿನ್ ಡೋಸ್ ನೀಡುವ ಮೊದಲ ದೇಶ ಬ್ರಿಟನ್
ಬ್ರಿಟನ್ ನಲ್ಲಿ ಪ್ರಸ್ತುತ 80ಕ್ಕಿಂತ ಅಧಿಕ ವಯಸ್ಸಿನವರಿಗೆ ಕೊರೊನಾ ಲಸಿಕೆಯ ಡೋಸ್ ನೀಡಲಾಗುತ್ತಿದೆ. ಇದಕ್ಕಾಗಿ ದೇಶಾದ್ಯಂತ ಸುಮಾರು 50 ಕೇಂದ್ರಗಳನ್ನು ತೆರೆಯಲಾಗಿದೆ. ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿರುವ  ವ್ಯಾಕ್ಸಿನ್ ಮೂಲಕ ಸಾಮಾನ್ಯ ಜನರಲ್ಲಿ ಲಸಿಕಾಕರಣ ಕಾರ್ಯಕ್ರಮ ನಡೆಸಲಾಗುತ್ತಿದೆ.


ಇದನ್ನು ಓದಿ-Covid-19:ತನ್ನ ವ್ಯಾಕ್ಷಿನ್ ಶೇ.95ರಷ್ಟು ಯಶಸ್ವಿ ಎಂದ Pfizer, ಸುರಕ್ಷತೆಯ ಮಾನದಂಡಗಳ ಮೇಲೂ ಸೈ


ಮೊದಲ ಹಂತದಲ್ಲಿ 8 ಲಕ್ಷ ಜನರಿಗೆ ಸಿಗಲಿದೆ ಕೊರೊನಾ ವ್ಯಾಕ್ಸಿನ್ ಡೋಸ್
ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಬ್ರಿಟನ್ ನಲ್ಲಿ ಮೊದಲ ಹಂತದಲ್ಲಿ 8 ಲಕ್ಷ ಜನರಿಗೆ ಕೊರೊನಾ ವ್ಯಾಕ್ಸಿನ್ ಡೋಸ್ ನೀಡಲಾಗುತ್ತಿದೆ. ಈ ಕುರಿತು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಬ್ರಿಟನ್ ನ ಆರೋಗ್ಯ ಸಚಿವ ಮ್ಯಾಟ್ ಹಿಂಕಾಕ್ ಕ್ರಿಸ್ಮಸ್ ಹೊತ್ತಿಗೆ ದೇಶದಲ್ಲಿ 10 ಲಕ್ಷ ಲಸಿಕೆಯ ಡೋಸ್ ಗಳು ಲಭ್ಯವಾಗಲಿವೆ ಎಂದಿದ್ದರು.