ಕಾಬೂಲ್: Ukraine Plane Hijacked - ಅಫ್ಘಾನಿಸ್ತಾನದ  (Afghanistan)ರಾಜಧಾನಿ ಕಾಬೂಲ್ (Kabul) ನಲ್ಲಿ ಉಕ್ರೇನಿಯನ್ ವಿಮಾನವನ್ನು (Ukraine Plane Hijacked) ಅಪಹರಣದ ಕುರಿತು ವರದಿಯಾಗಿದೆ. ಉಕ್ರೇನಿಯನ್ ನಾಗರಿಕರನ್ನು ಸ್ಥಳಾಂತರಿಸಲು ಈ ವಿಮಾನವು ಅಫ್ಘಾನಿಸ್ತಾನವನ್ನು ತಲುಪಿತ್ತು. ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆಸೆನಿನ್ ಮಂಗಳವಾರ ಈ ಮಾಹಿತಿಯನ್ನು ನೀಡಿದ್ದಾರೆ. ಇದೇ ವೇಳೆ  ಈ ವಿಮಾನವನ್ನು ಅಪಹರಣದ ನಂತರ ಇರಾನ್ ಕಡೆಗೆ ಕೊಂಡೊಯ್ಯಲಾಗುತ್ತಿದೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ರಷ್ಯಾದ ಸುದ್ದಿ ಸಂಸ್ಥೆ ತಾಶ್ ಪ್ರಕಟಿಸಿರುವ ವರದಿಯ ಪ್ರಕಾರ, ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆಸೆನಿನ್, 'ನಮ್ಮ ವಿಮಾನವನ್ನು ಭಾನುವಾರ ಕೆಲವರು ಅಪಹರಿಸಿದ್ದಾರೆ. ಅಪಹರಣಕಾರರು ಶಸ್ತ್ರಸಜ್ಜಿತರಾಗಿದ್ದರು. ಮಂಗಳವಾರ, ಈ ವಿಮಾನವು ನಮ್ಮಿಂದ ಕಣ್ಮರೆಯಾಗಿದೆ. ಉಕ್ರೇನಿಯನ್ನರನ್ನು ಏರ್ ಲಿಫ್ಟ್ ಮಾಡುವ ಬದಲು, ವಿಮಾನದಲ್ಲಿದ್ದ ಕೆಲವರು ಅದನ್ನು ಇರಾನ್ ಗೆ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಇತರ ಮೂರು ಏರ್‌ಲಿಫ್ಟ್ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಏಕೆಂದರೆ ನಮ್ಮ ನಾಗರಿಕರು ವಿಮಾನ ನಿಲ್ದಾಣವನ್ನು ತಲುಪಲು ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ. 


ಆದರೆ,  ವಿಮಾನವು ಏನಾಯಿತು ಅಥವಾ ಕೀವ್ ವಿಮಾನವನ್ನು ಮರಳಿ ತರಲು ಪ್ರಯತ್ನಿಸುತ್ತದೆಯೇ ಎಂಬ ಬಗ್ಗೆ ಸಚಿವರು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಅವರ ನೇತೃತ್ವದಲ್ಲಿ ಇಡೀ ರಾಜತಾಂತ್ರಿಕ ಸೇವೆಯು ವಾರವಿಡೀ ಕಾರ್ಯನಿರ್ವಹಿಸುತ್ತಿದೆ ಎಂದು ಯೆಸೆನಿನ್ ಒತ್ತಿ ಹೇಳಿದ್ದಾರೆ.


ಇದನ್ನೂ ಓದಿ-Taliban: ಜೀನ್ಸ್ ಧರಿಸಿದರೆ ಥಳಿತ, ನೇಲ್ ಪಾಲಿಶ್ ಹಾಕಿದರೆ ಸಿಗಲಿದೆ ಭಯಾನಕ ಶಿಕ್ಷೆ


ರಷ್ಯಾದ (Russia) ಸುದ್ದಿ ಸಂಸ್ಥೆ ತಾಶ್ ವರದಿಯ ಪ್ರಕಾರ, ಭಾನುವಾರ, 31 ಉಕ್ರೇನಿಯನ್ ಪ್ರಜೆಗಳು ಸೇರಿದಂತೆ 83 ಜನರನ್ನು ಹೊತ್ತ ಸೇನಾ ವಿಮಾನವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಉಕ್ರೇನ್ ರಾಜಧಾನಿ ಕೀವ್ ತಲುಪಿತ್ತು. ಈ ವಿಮಾನದ ಮೂಲಕ 12 ಉಕ್ರೇನಿಯನ್ ಸೇನಾ ಸಿಬ್ಬಂದಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಉಕ್ರೇನಿಯನ್ ಅಧ್ಯಕ್ಷರ ಕಚೇರಿ ತಿಳಿಸಿದೆ. ಇದರ ಹೊರತಾಗಿ, ವಿದೇಶಿ ಪತ್ರಕರ್ತರು ಮತ್ತು ಸಹಾಯ ಕೋರುವ ಕೆಲವು ಜನರನ್ನು ಸಹ ಹೊರಹಾಕಲಾಗಿದೆ ಎನ್ನಲಾಗಿದೆ.


ಇದನ್ನೂ ಓದಿ-Viral News: ಚಿಂಪಾಜಿಯೊಡನೆ ಸಂಬಂಧ; ಮಹಿಳೆಗೆ ಮೃಗಾಲಯಕ್ಕೆ ಬರದಂತೆ ನಿಷೇಧ..!


ಅಫ್ಘಾನಿಸ್ತಾನ ತೊರೆಯಲು ಇನ್ನೂ ಕಾಯುತ್ತಿರುವ ಸುಮಾರು 100 ಉಕ್ರೇನಿಯನ್ ಪ್ರಜೆಗಳಿದ್ದಾರೆ ಎಂದು ಉಕ್ರೇನ್‌ನ ಅಧ್ಯಕ್ಷೀಯ ಕಚೇರಿ ಹೇಳಿದೆ.


ಗಜನಿ ಪ್ರವೇಶದ್ವಾರವನ್ನು ಕ್ರೇನ್ ನಿಂದ ಮುರಿದ ತಾಲಿಬಾನ್
ಏತನ್ಮಧ್ಯೆ, ಅಫ್ಘಾನಿಸ್ತಾನದ ಪಾರಂಪರಿಕ ತಾಣಗಳನ್ನು ತಾಲಿಬಾನ್ ಗುರಿಯಾಗಿಸಿದೆ ಎಂಬ ಸುದ್ದಿಯಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೋದಲ್ಲಿ, ತಾಲಿಬಾನ್ ಗಳು ಘಜ್ನಿ ಪ್ರಾಂತ್ಯದ ಪ್ರವೇಶ ದ್ವಾರವನ್ನು ಕ್ರೇನ್ ನಿಂದ ಮುರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದ್ವಾರವನ್ನು ಇಸ್ಲಾಮಿಕ್ ಸಾಮ್ರಾಜ್ಯದ ಸ್ಥಾಪನೆಯ ನೆನಪಿಗಾಗಿ ನಿರ್ಮಿಸಲಾಗಿತ್ತು.


Ukraine Plane Hijack Update - ವಿಮಾನ ಅಪಹರಣವನ್ನು ನಿರಾಕರಿಸಿದ Kiev ಎಂದ ತೆಹರಾನ್ ಟೈಮ್ಸ್ 
ಇನ್ನೊಂದೆಡೆ ಈ ಕುರಿತು 'ತೆಹರಾನ್ ಟೈಮ್ಸ್' ಅನ್ನು ಉಲ್ಲೇಖಿಸಿ ಸುದ್ದಿ ಪ್ರಕಟಿಸಿರುವ ANI ಸುದ್ದಿ ಸಂಸ್ಥೆ, ವಿಮಾನ ಅಪಹರಣವನ್ನು ಕೀವ್ ನಿರಾಕರಿಸಿದೆ ಎನ್ನಲಾಗಿದೆ.  


Taliban: ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ತಾಲಿಬಾನ್‌ಗೆ ದೊಡ್ಡ ಹಿನ್ನಡೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.