ಕೀವ್: ರಷ್ಯಾ (Russia) ಸೇನೆ ಮುತ್ತಿಗೆ ಹಾಕಿದ್ದ ಬಂದರು ನಗರ ಮರಿಯುಪೋಲ್‌ಗೆ ಪ್ರವೇಶವನ್ನು ರಷ್ಯಾ ನಿರ್ಬಂಧಿಸುತ್ತಿದೆ. ಇದಕ್ಕೆ ಕಾರಣವೇನೆಂದರೆ ಅಲ್ಲಿ ಸಾವಿರಾರು ಜನರನ್ನು ರಷ್ಯಾ ಕೊಂದಿದೆ. ಅದರ ಸಾಕ್ಷಿಗಳನ್ನು ನಾಶ ಮಾಡಲು ಹೀಗೆ ಮಾಡುತ್ತಿದೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಗಂಭೀರವಾಗಿ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

"ರಷ್ಯಾದ ಕ್ರೂರ ಕೃತ್ಯ ಜಗತ್ತಿನ ಮುಂದೆ  ಬಯಲಾಗುತ್ತದೆ ಎಂಬ ಭಯದಲ್ಲಿ ರಷ್ಯಾ, ನಮಗೆ ಮರಿಯುಪೋಲ್‌ಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ" ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ. 


ಇದನ್ನು ಓದಿ: ಉಕ್ರೇನ್ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವುದೇಕೆ?


"ಅದೊಂದು ದೊಡ್ಡ ದುರಂತ ಎಂದು ನಾನು ಭಾವಿಸುತ್ತೇನೆ. ಮರಿಯುಪೋಲ್‌ ನರಕವಾಗಿದೆ.  ಸಾವಿರಾರು ಜನರು ಅಲ್ಲಿ ಹತ್ಯೆಯಾಗಿದ್ದಾರೆ. ಜೊತೆಗೆ ಸಾವಿರಾರು ಜನರು ಗಾಯಗೊಂಡಿದ್ದಾರೆ. ಆದರೆ ಎಲ್ಲ ಸಾಕ್ಷ್ಯಗಳನ್ನು ಮರೆಮಾಚುವಲ್ಲಿ ರಷ್ಯಾ ಯಶಸ್ವಿಯಾಗುವುದಿಲ್ಲ" ಎಂದು ಹೇಳಿದ್ದಾರೆ.


"ಮೃತಪಟ್ಟ ಎಲ್ಲಾ ಉಕ್ರೇನಿಯನ್ನರ ಮೃತದೇಹಗಳನ್ನು ಹೂಳಲು ಅವರಿಗೆ ಸಾಧ್ಯವಾಗುವುದಿಲ್ಲ. ಸತ್ತಿರುವುದು ಸಾವಿರಾರು ಜನರು, ಅದನ್ನು ಮರೆಮಾಚಲು ಸಾಧ್ಯವೇ ಇಲ್ಲ"ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ: China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್‌


ಇನ್ನು ರಷ್ಯಾದೊಂದಿಗೆ ಶಾಂತಿ ಮಾತುಕತೆಯನ್ನು ಮುಂದುವರೆಸುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಮಾತುಕತೆ ನಡೆಯಲೇಬೇಕು. ಇಲ್ಲದಿದ್ದರೆ, ಯುದ್ಧ ನಿಲ್ಲಿಸುವುದು ಕಷ್ಟ" ಎಂದು ಹೇಳಿದ್ದಾರೆ. 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.