ನವದೆಹಲಿ: India Will Remove Its Embassy From Ukraine - ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಉಕ್ರೇನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಪೋಲೆಂಡ್‌ಗೆ ಸ್ಥಳಾಂತರಿಸುವುದಾಗಿ ವಿದೇಶಾಂಗ ಸಚಿವಾಲಯ ಘೋಷಿಸಿದೆ.

COMMERCIAL BREAK
SCROLL TO CONTINUE READING

ಟ್ವೀಟ್ ಮೂಲಕ ದೊರೆತ ಮಾಹಿತಿ
ಉಕ್ರೇನ್‌ನ (Russia-Ukraine War) ಪಶ್ಚಿಮ ಭಾಗಗಳಲ್ಲಿನ ದಾಳಿಗಳು ಸೇರಿದಂತೆ ಉಕ್ರೇನ್‌ನಲ್ಲಿ ವೇಗವಾಗಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಉಕ್ರೇನ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಅದು ಹೇಳಿದೆ.


ಇದನ್ನೂ ಓದಿ-Russia-Ukraine War:ತಾಯಿಗೆ ಔಷಧಿ ತರಲು ಹೋದ ಮಹಿಳೆ ರಷ್ಯಾ ದಾಳಿಗೆ ಬಲಿ

ರಾಯಭಾರ ಕಚೇರಿಯ ಇನ್ಪುಟ್ ಅತ್ಯಗತ್ಯ
ಭಾರತೀಯ ರಾಯಭಾರ ಕಚೇರಿಯು ಇನ್ನೂ ಉಕ್ರೇನ್ ನಲ್ಲಿ ಸಿಕ್ಕಿಬಿದ್ದಿರುವ ತನ್ನ ನಾಗರಿಕರೊಂದಿಗೆ ನಿರಂತರವಾಗಿ ಇದೇ ವೇಳೆ ರಾಯಭಾರ ಕಚೇರಿಯ ಸಹಾಯದಿಂದ, ಇದುವರೆಗೆ ಎಲ್ಲಾ ಭಾರತೀಯರನ್ನು ಯುದ್ಧ ಸ್ಥಳದಿಂದ ರಕ್ಷಿಸಲಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕಾಲಕಾಲಕ್ಕೆ ಜನರಿಗೆ ಸಲಹೆಗಳನ್ನು ನೀಡುತ್ತಲೇ ಇರುತ್ತದೆ, ಇದು ಅಲ್ಲಿರುವ ಜನರಿಗೆ ಸಾಕಷ್ಟು ಸಹಾಯ ಮಾಡುತ್ತದೆ.


ಇದನ್ನೂ ಓದಿ-ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ದಾಳಿ ಕುರಿತು ನ್ಯಾಟೋ ಮುಖ್ಯಸ್ಥರು ಹೇಳಿದ್ದೇನು?

ಉಕ್ರೇನ್ ನಲ್ಲಿ ಸತತ ಬಾಂಬ್ ದಾಳಿಗಳನ್ನು ಮುಂದುವರೆಸಿದ ರಷ್ಯಾ
ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ತನ್ನ ದಾಳಿ ಮುಂದುವರೆಸಿದ್ದು, ಪಶ್ಚಿಮ ಪ್ರದೇಶಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ. ಎಲ್ಲಾ ನಿರ್ಬಂಧಗಳ ಹೊರತಾಗಿಯೂ, ರಷ್ಯಾ ತನ್ನ ಷರತ್ತುಗಳಿಗೆ ಅಂಟಿಕೊಂಡಿದೆ, ಆದರೆ ಉಕ್ರೇನ್ ರಷ್ಯಾಕ್ಕೆ ತಲೆಬಾಗುವ ಬದಲು ನಿರಂತರವಾಗಿ ದಾಳಿಗೆ ಪ್ರತಿ ದಾಳಿ ನಡೆಸುತಿದೆ. ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಉಲ್ಲೇಖಿಸಿ, ಉಕ್ರೇನ್‌ನ ರಾಯಭಾರ ಕಚೇರಿಯನ್ನು ಪೋಲೆಂಡ್‌ಗೆ ಸ್ಥಳಾಂತರಿಸಲು ಭಾರತ ಸರ್ಕಾರ ಭಾನುವಾರ ನಿರ್ಧರಿಸಿದೆ.


ಇದನ್ನೂ ಓದಿ-Death Penalty: ಈ ದೇಶದಲ್ಲಿ ಒಂದೇ ದಿನದಲ್ಲಿ 81 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆಯಂತೆ !


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.