ಕೇನ್ಸ್ ಚಿತ್ರೋತ್ಸವದಲ್ಲಿ ಕಿರುಚುತ್ತಾ ಫೋಟೋಗ್ರಾಫರ್ ಬಳಿ ಓಡಿಬಂದ ಉಕ್ರೇನ್ ಮಹಿಳೆ!
ಮಹಿಳೆಯು ತಾನು ಧರಿಸಿದ್ದ ಉಡುಪಿನ ಮೇಲೆ `ನಮ್ಮ ಮೇಲೆ ಅತ್ಯಾಚಾರ ಎಸಗುವುದನ್ನು ನಿಲ್ಲಿಸಿ(Stop Raping Us)` ಎಂದು ಉಕ್ರೇನಿಯನ್ ದೇಶದ ಧ್ವಜದ ಬಣ್ಣಗಳಲ್ಲಿ ಬರೆದಿದ್ದಾರೆ. ಕೆಂಪು ಬಣ್ಣದ ಟಾಪ್‌ಲೆಸ್ ಉಡುಪು ಧರಿಸಿದ್ದ ಆಕೆ ಕಿರುಚುತ್ತಾ ಫೋಟೋಗ್ರಾಪರ್‌ಗಳ ಬಳಿಗೆ ಓಡಿ ಬಂದಿದ್ದಾರೆ.
ಪ್ಯಾರಿಸ್: ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದಾಗಿರುವ ಕೇನ್ಸ್ ಚಲನಚಿತ್ರೋತ್ಸವಕ್ಕೆ 75 ವರ್ಷ ತುಂಬಿದೆ. ಇಂತಹ ವೇದಿಕೆಯಲ್ಲಿ ಉಕ್ರೇನ್‌ನ ಮಹಿಳೆಯೊಬ್ಬರು ಪ್ರತಿಭಟನೆ ನಡೆಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.
ಇದನ್ನು ಓದಿ: ಮಹದೇವಪುರ ವ್ಯಾಪ್ತಿಯಲ್ಲೂ ರಾಜಕಾಲುವೆಗಳ ಒತ್ತುವರಿ.. ಶೀಘ್ರ ತೆರವಿಗೆ ಸೂಚನೆ
ಮಹಿಳೆಯು ತಾನು ಧರಿಸಿದ್ದ ಉಡುಪಿನ ಮೇಲೆ "ನಮ್ಮ ಮೇಲೆ ಅತ್ಯಾಚಾರ ಎಸಗುವುದನ್ನು ನಿಲ್ಲಿಸಿ(Stop Raping Us)" ಎಂದು ಉಕ್ರೇನಿಯನ್ ದೇಶದ ಧ್ವಜದ ಬಣ್ಣಗಳಲ್ಲಿ ಬರೆದಿದ್ದಾರೆ. ಕೆಂಪು ಬಣ್ಣದ ಟಾಪ್‌ಲೆಸ್ ಉಡುಪು ಧರಿಸಿದ್ದ ಆಕೆ ಕಿರುಚುತ್ತಾ ಫೋಟೋಗ್ರಾಪರ್‌ಗಳ ಬಳಿಗೆ ಓಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ Stop Raping Us ಎಂಬ ಘೋಷಣೆಯನ್ನೂ ಕೂಗಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆಕೆಯನ್ನು ಅಲ್ಲಿಂದ ಬೇರೆ ಕಡೆಗೆ ಕರೆದುಕೊಂಡು ಹೋಗಿದ್ದಾರೆ.
ಸದ್ಯ ಮಹಿಳೆಯನ್ನು ಉಕ್ರೇನ್ ಮೂಲದವರು ಎನ್ನಲಾಗಿದೆ. ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಅಷ್ಟೇ ಅಲ್ಲದೆ, ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದನ್ನು ಖಂಡಿಸಿ ಮಹಿಳೆ ಚಿತ್ರೋತ್ಸವದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
Most Beautiful Women: ವಿಶ್ವದ 5 ಅತ್ಯಂತ ಸುಂದರ ಮಹಿಳೆಯರಿವರು
ಇನ್ನು ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಉಕ್ರೇನ್ ರಾಷ್ಟ್ರ ಸಂಪೂರ್ಣ ದಾಳಿಗೆ ತುತ್ತಾಗಿದ್ದು, ಮರುಜೀವ ಪಡೆಯಲು ಹೆಣಗಾಡುತ್ತಿದೆ. ರಷ್ಯಾದ ಪಡೆಗಳು ಉಕ್ರೇನ್‌ನ ಅನೇಕ ನಗರಗಳನ್ನು ಅತಿಕ್ರಮಿಸಲು ಮುಂದಾದ ಬಳಿಕ ಇದುವರೆಗೆ ಸುಮಾರು 3 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.