ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ಈ ಕುರಿತು ಕೋಫಿ ಅನ್ನಾನ್ ಫೌಂಡೇಶನ್ ಟ್ವಿಟರ್ ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, "ವಿಶ್ವ ಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನೋಬಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೋಫಿ ಅನ್ನಾನ್ ಅವರು ಆಗಸ್ಟ್ 18ರಂದು ನಿಧನರಾಗಿದ್ದಾರೆ ಎಂದು ತಿಳಿಸಲು ಅವರ ಕುಟುಂಬ ಮತ್ತು ಕೋಫಿ ಅನ್ನಾನ್ ಫೌಂಡೇಶನ್ ದುಖಿಸುತ್ತದೆ" ಎಂದು ಹೇಳಲಾಗಿದೆ. 



ಘಾನ ದೇಶದ ಪ್ರಜೆಯಾದ ಕೋಫಿ ಅನ್ನಾನ್ ಅವರು ವಿಶ್ವದ ಪ್ರಮುಖ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಿದ ಮೊದಲ ಆಫ್ರಿಕನ್ ಕಪ್ಪು ವರ್ಣೀಯರು. ವಿಶ್ವಸಂಸ್ಥೆಯ ಕಾರ್ಯದರ್ಶಿಯಾಗಿ 1997 ರಿಂದ ಡಿಸೆಂಬರ್ 2006ರವರೆಗೆ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಸಾಧನೆಗೆ ಮೆಚ್ಚಿ 2001ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.