WhatsAppನಲ್ಲೂ ಬಂತು ಈ ವೈಶಿಷ್ಟ್ಯ, ಹೀಗೆ ಆಕ್ಟಿವೇಟ್ ಮಾಡಿ
ಕಳೆದ ಹಲವು ದಿನಗಳಿಂದ ವಾಟ್ಸ್ ಆಪ್ ಡಾರ್ಕ್ ಮೋಡ್ ವೈಶಿಷ್ಟ್ಯವನ್ನು ತನ್ನ ಬಳಕೆದಾರರಿಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿತ್ತು.
ನವದೆಹಲಿ:ಇನ್ಸ್ಟಾಗ್ರಾಮ್ ಮಾದರಿಯಲ್ಲಿ ಒಂದು ವೇಳೆ WhatsAppನಲ್ಲಿಯೂ ಕೂಡ 'ಡಾರ್ಕ್ ಮೋಡ್' ವೈಶಿಷ್ಟ್ಯ ಕಂಡುಬಂದರೆ ಹೇಗಿರಲಿದೆ. ನಿಮ್ಮ ಈ ಇಚ್ಛೆಯನ್ನು ಇದೀಗ ಕಂಪನಿ ಆಲಿಸಿದೆ. ಹೌದು, ಇನ್ಸ್ಟಾಗ್ರಾಮ್ ಬಳಿಕ ಇದೀಗ ವಾಟ್ಸ್ ಆಪ್ ಕೂಡ ತನ್ನ ಬಳಕೆದಾರರಿಗೆ ಡಾರ್ಕ್ ಮೋಡ್ ವೈಶಿಷ್ಟ್ಯ ಆರಂಭಿಸಿದೆ. ಇದರಲ್ಲಿ ನಿಮ್ಮ ವಾಟ್ಸ್ ಆಪ್ ಥೀಮ್ ಬದಲಾವಣೆಯಾಗಲಿದೆ. ಇದುವರೆಗೆ ನಿಮಗೆ ವಾಟ್ಸ್ ಆಪ್ ನಲ್ಲಿ ತಿಳಿ ಹಸಿರು ಬಣ್ಣದ ಟೆಕ್ಸ್ಚರ್ ಕಾಣಸಿಗುತ್ತಿತ್ತು. ಆದರೆ ಇನ್ಮುಂದೆ ಡಾರ್ಕ್ ಮೋಡ್ ನಲ್ಲಿ ನಿಮಗೆ ಗಾಢ ಹಸಿರು ಬಣ್ಣದ ಟೆಕ್ಸ್ಚರ್ ಕಾಣಸಿಗಲಿದೆ. ಕಳೆದ ಹಲವು ದಿನಗಳಿಂದ ವಾಟ್ಸ್ ಆಪ್ ಡಾರ್ಕ್ ಮೋಡ್ ವೈಶಿಷ್ಟ್ಯವನ್ನು ತನ್ನ ಬಳಕೆದಾರರಿಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿತ್ತು. ಸದ್ಯ ವಾಟ್ಸ್ ಆಪ್ ತನ್ನ 'ಡಾರ್ಕ್ ಮೋಡ್' ವೈಶಿಷ್ಟ್ಯವನ್ನು ಅನಾವರಣಗೊಳಿಸಿದ್ದು, ಬಳಕೆದಾರರು ಇದನ್ನು ಬಳಸಬಹುದಾಗಿದೆ. ಸದ್ಯ ಇದು ಬೀಟಾ ಟೆಸ್ಟಿಂಗ್ ನಲ್ಲಿದ್ದು, ನಂತರ ಸ್ಟೇಬಲ್ ವರ್ಷನ್ ನಲ್ಲಿಯೂ ಕೂಡ ಬಳಕೆದಾರರು ಇದನ್ನು ಬಳಸಬಹುದು.
ಕೇವಲ ಬೀಟಾ ವರ್ಷನ್ ಬಳಕೆದಾರರಿಗೆ ಮಾತ್ರ
ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಥೀಮ್ ಸೆಲೆಕ್ಷನ್ ವಿಭಾಗದಲ್ಲಿ ಇರಲಿದೆ. ಬಳಕೆದಾರರು ವಾಟ್ಸ್ ಆಪ್ ನ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಈ ಥೀಮ್ ಅನ್ನು ಅಳವಡಿಸಬಹುದಾಗಿದೆ. ಸದ್ಯ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ವೈಶಿಷ್ಟ್ಯ ವಾಟ್ಸ್ ಆಪ್ ನ 2.20.13 ಆವೃತ್ತಿಯಲ್ಲಿ ಮಾತ್ರ ಕಾಣಸಿಗಲಿದೆ. ಒಂದು ವೇಳೆ ನೀವೂ ಕೂಡ ಬೀಟಾ ಟೆಸ್ಟರ್ ಆಗಿದ್ದು ಹಾಗೂ ನಿಮ್ಮ ಬಳಿ ಇದುವರೆಗೆ ಈ ಅಪ್ಡೇಟ್ ಬಂದಿಲ್ಲವಾದರೆ ನೀವು APKMirror ನಿಂದ WhatsApp beta v2.20.13 APK ಫೈಲ್ ಡೌನ್ಲೋಡ್ ಮಾಡಬಹುದಾಗಿದೆ.
ಈ ರೀತಿ ಈ ವೈಶಿಷ್ಟ್ಯವನ್ನು ಅಳವಡಿಸಿ
ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ವಾಟ್ಸ್ ಆಪ್ ನ ನೂತನ ಬೀಟಾ ಆವೃತ್ತಿ ಡೌನ್ಲೋಡ್ ಮಾಡಿ.
ಬಳಿಕ ಆಪ್ ಅನ್ನು ನಿಮ್ಮ ಫೋನ್ ಮೂಲಕ ತೆರೆಯಿರಿ.
ಈಗ ಮೇಲೆ ನೀಡಲಾದ ಮತ್ತು ಬಲಭಾಗದಲ್ಲಿರುವ ಮೇನ್ಯೂ ಐಕಾನ್ ಮೇಲೆ ಕ್ಲಿಕ್ಕಿಸಿ.
ಬಳಿಕ ಸೆಟ್ಟಿಂಗ್ ಗೆ ಹೋಗಿ, ಚಾಟ್ಸ್ ಮೇಲೆ ಕ್ಲಿಕ್ಕಿಸಿ.
ಅಲ್ಲಿ ನಿಮಗೆ 'ಥೀಮ್' ಆಪ್ಶನ್ ಕಾಣಿಸಿಕೊಳ್ಳಲಿದೆ. ಅಲ್ಲಿ ಡಾರ್ಕ್ ಮೋಡ್ ಅನ್ನು ಆಯ್ಕೆ ಮಾಡಬಹುದು.
ಇದೀಗ ನಿಮ್ಮ ಫೋನ್ ನಲ್ಲಿ ಡಾರ್ಕ್ ಮೋಡ್ ಎನೇಬಲ್ ಆಗಲಿದೆ.