ಕಳೆದ ವರ್ಷ 50,000 ಕ್ಕಿಂತಲೂ ಹೆಚ್ಚಿನ ಭಾರತೀಯರಿಗೆ ಅಮೆರಿಕನ್ ಪೌರತ್ವ
2015 ಕ್ಕೆ ಹೋಲಿಸಿದರೆ ಅಮೆರಿಕದ ಪೌರತ್ವವನ್ನು ತೆಗೆದುಕೊಳ್ಳುತ್ತಿರುವ ಭಾರತೀಯ ನಾಗರಿಕರ ಸಂಖ್ಯೆ ಎಂಟು ಸಾವಿರ ಹೆಚ್ಚಾಗಿದೆ. 2015 ರಲ್ಲಿ 42,213 ಭಾರತೀಯರು ಅಮೆರಿಕನ್ ಪೌರತ್ವವನ್ನು ಪಡೆದರು.
ವಾಷಿಂಗ್ಟನ್: 2017 ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನವು 50,000 ಕ್ಕಿಂತಲೂ ಹೆಚ್ಚಿನ ಭಾರತೀಯರಿಗೆ ಅಮೆರಿಕನ್ ಪೌರತ್ವವನ್ನು ಒದಗಿಸಿದೆ, ಇದು 2016 ಕ್ಕಿಂತ ನಾಲ್ಕು ಸಾವಿರಕ್ಕಿಂತ ಅಧಿಕವಾಗಿದೆ. 2017 ರಲ್ಲಿ 50,802 ಭಾರತೀಯರು ಅಮೆರಿಕನ್ ಪೌರತ್ವವನ್ನು ಸ್ವೀಕರಿಸಿದ್ದಾರೆ ಎಂದು ಭದ್ರತಾ ಇಲಾಖೆಯು ತನ್ನ ಇತ್ತೀಚಿನ ವಲಸೆ ವರದಿಯಲ್ಲಿ ತಿಳಿಸಿದೆ.
ಈ ಸಂಖ್ಯೆಯು 2016 ರಲ್ಲಿ ಅಮೇರಿಕಾ ಪೌರತ್ವವನ್ನು ಪಡೆದ ಭಾರತೀಯರಿಗಿಂತ 4 ಸಾವಿರಕ್ಕಿಂತ ಹೆಚ್ಚು. ಅಂದರೆ 2016 ರಲ್ಲಿ 46,188 ಭಾರತೀಯರಿಗೆ ಅಮೇರಿಕಾ ಪೌರತ್ವ ಲಭಿಸಿತ್ತು. ಇನ್ನು ಕಳೆದ ವರ್ಷ ಅಮೇರಿಕಾ ಪೌರತ್ವ ಪಡೆದ ಭಾರತೀಯರ ಸಂಖ್ಯೆ 2015 ರಲ್ಲಿ ಪೌರತ್ವವನ್ನು ಪಡೆದ ಭಾರತೀಯರ ಸಂಖ್ಯೆಗಿಂತ ಎಂಟು ಸಾವಿರ ಹೆಚ್ಚಾಗಿದೆ. 2015 ರಲ್ಲಿ 42,213 ಭಾರತೀಯರು ಅಮೆರಿಕನ್ ಪೌರತ್ವವನ್ನು ಪಡೆದಿದ್ದರು.
ವರದಿಯ ಪ್ರಕಾರ, 2010 ರಲ್ಲಿ ಒಟ್ಟು 7,07,265 ವಿದೇಶಿ ಪ್ರಜೆಗಳು ಅಮೆರಿಕನ್ ಪೌರತ್ವವನ್ನು ಸ್ವೀಕರಿಸಿದ್ದಾರೆ. ಪೌರತ್ವವನ್ನು ಪಡೆದಿರುವ ಭಾರತೀಯರಲ್ಲಿ ಅಧಿಕ ಮಂದಿ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಪೌರತ್ವ ಪಡೆದಿರುವ ಭಾರತೀಯರಲ್ಲಿ ಸುಮಾರು 12,000 ಜನರು ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.