ವಾಷಿಂಗ್ಟನ್: ಕೊರೋನಾ ಸೋಂಕಿಗೆ ಔಷಧಿ ಯಾವಾಗ ಬರುತ್ತಪ್ಪಾ ಎಂಬುದು ಅನೇಕರ ಕಾತುರವಾಗಿತ್ತು. ಇದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕೊರೋನಾ ಸೋಂಕಿಗೆ ಫೈಜರ್-ಬಯೊಎನ್ ಟೆಕ್ ಲಸಿಕೆಯನ್ನು ತುರ್ತು ಬಳಕೆಗಾಗಿ ಅಮೇರಿಕಾ ಅಂತಿಮ ಒಪ್ಪಿಗೆಯನ್ನು ನೀಡಿದೆ. ಈ ಮೂಲಕ ಕೊರೋನಾಗೆ ಔಷಧಿ ಸಿದ್ಧವಾದಂತೆ ಆಗಿದೆ.


COMMERCIAL BREAK
SCROLL TO CONTINUE READING

ಜರ್ಮನಿಯ ಬಯೋಎನ್ ಟೆಕ್ ಸಹಭಾಗಿತ್ವದಲ್ಲಿ ಅಮೇರಿಕಾದ ಫಾರ್ಮಾಸುಟಿಕಲ್ ಕಂಪನಿಯ ಫೈಜರ್ ಕೊರೋನಾ ಲಸಿಕೆ(Covid Vaccine)ಯನ್ನು ಅಭಿವೃದ್ಧಿ ಪಡಿಸಿತ್ತು. ಎಲ್ಲಾ ಹಂತಗಳಲ್ಲಿ ಪಾಸ್ ಆಗಿದ್ದಂತ ಈ ಲಸಿಕೆ ಕೊರೋನಾ ಸೋಂಕಿಗೆ ಶೇ.90ರಷ್ಟು ವಾಸಿ ಮಾಡುವ ಗುಣಹೊಂದಿದೆ ಎನ್ನಲಾಗಿತ್ತು.


COVID-19: ಮೃಗಾಲಯದ ನಾಲ್ಕು ಸಿಂಹಗಳಿಗೆ ಕರೋನಾ ಪಾಸಿಟಿವ್


ಇಂತಹ ಔಷಧಿ ಬಳಕೆಗೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತ ಮಂಡಳಿ(ಎಫ್ ಡಿ ಎ) ಲಸಿಕೆಯ ತುರ್ತು ಬಳಕೆಗೆ ಕಂಪನಿಗಳಿಗೆ ಅಧಿಕೃತ ಒಪ್ಪಿಗೆ ನೀಡಿದೆ. ಈ ಮೂಲಕ ಕೊರೋನಾ ಸೋಂಕಿನ ಲಸಿಕೆಗೆ ಅಮೇರಿಕಾ ಅನುಮತಿ ನೀಡಿದೆ.


ಮನೆಗೆ ಹೋಗಲು ಬಯಸಿದ ಮೆಲೆನಿಯಾ ಟ್ರಂಪ್ ...!