ಅಮೇರಿಕಾದ ವಾಣಿಜ್ಯ ಸಚಿವ ವಿಲ್ಬರ್ ರಾಸ್ ಆಸ್ಪತ್ರೆಗೆ ದಾಖಲು... ಕಾರಣ ಇಲ್ಲಿದೆ
ಮಾಜಿ ಬ್ಯಾಂಕರ್ ರಾಸ್ ಅವರನ್ನು ಫೆಬ್ರವರಿ 2017 ರಲ್ಲಿ ವಾಣಿಜ್ಯ ಸಚಿವರನ್ನಾಗಿ ನೇಮಿಸಲಾಗಿತ್ತು.
ವಾಷಿಂಗ್ಟನ್: ಯುಎಸ್ (ಯುಎಸ್ಎ) ವಾಣಿಜ್ಯ ಸಚಿವ ವಿಲ್ಬರ್ ರಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಲ್ಬರ್ ರಾಸ್‌ಗೆ 82 ವರ್ಷ ವಯಸ್ಸಾಗಿರುವ ಕಾರಣ ಮುನ್ನೆಚ್ಚರಿಕೆಯಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕಾದ ವಾಣಿಜ್ಯ ಸಚಿವಾಲಯ, " ರಾಸ್ ಅವರಿಗೆ ಮಾಮೂಲಿ ಹಾಗೂ ಕೊರೊನಾ ವೈರಸ್ ಗೆ ಸಂಬಂಧ ಹೊಂದಿರದೆ ಇರುವ ಆರೋಗ್ಯ ಸಮಸ್ಯೆಯ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಸ್ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಶೀಘ್ರದಲ್ಲಿಯೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಆಧ್ಯತೆ ಇದೆ" ಎಂದು ಹೇಳಿದೆ.
ಆದರೆ, ರಾಸ್ ಅವರ ಆರೋಗ್ಯದ ಕುರಿತು ವಿಸ್ತೃತ ಮಾಹಿತಿ ನೀಡಲು ವಾಣಿಜ್ಯ ಸಚಿವಾಲಯ ನಿರಾಕರಿಸಿದೆ. ಮಾಜಿ ಬ್ಯಾಂಕರ್ ಆಗಿರುವ ರಾಸ್ ಅವರನ್ನು 2017ರಲ್ಲಿ ವಾಣಿಜ್ಯ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.