ನವದೆಹಲಿ: ಯುನೈಟೆಡ್ ಸ್ಟೇಟ್ಸ್ (ಯುಎಸ್) ಮಿಲಿಟರಿ ಪಡೆಗಳು ಭಾನುವಾರ ಕೇವಲ ಎರಡು ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಎರಡನೇ ವೈಮಾನಿಕ ದಾಳಿ ನಡೆಸಿತು ಮತ್ತು ಕಾಬೂಲ್‌ನ ಹಮದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಸನ್ನಿಹಿತ ಐಸಿಸ್-ಕೆ' ಬೆದರಿಕೆಯನ್ನು ತೆಗೆದುಹಾಕಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾಬೂಲ್ ವಶಕ್ಕೆ ಪಡೆದ ನಂತರ ಕಾಶ್ಮೀರ ಕುರಿತಂತೆ ಹೇಳಿಕೆ ನೀಡಿದ ತಾಲಿಬಾನ್


"ಯುಎಸ್ ಮಿಲಿಟರಿ ಪಡೆಗಳು ಇಂದು ಕಾಬೂಲ್‌ (Kabul)ನಲ್ಲಿ ವಾಹನವೊಂದರ ಮೇಲೆ ಮಾನವ ರಕ್ಷಣಾ ರಹಿತ ವಾಯುದಾಳಿ ನಡೆಸಿದ್ದು, ಹಮದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐಸಿಸ್-ಕೆ ಬೆದರಿಕೆಯನ್ನು ನಿವಾರಿಸಿದೆ" ಎಂದು ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಬಿಲ್ ಅರ್ಬನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಸದಸ್ಯರಿಂದ ಗುಂಡಿನ ದಾಳಿ


"ನಾವು ಯಶಸ್ವಿಯಾಗಿ ಗುರಿಯನ್ನು ಮುಟ್ಟಿದ್ದೇವೆ ಎಂಬ ವಿಶ್ವಾಸ ನಮಗಿದೆ.ವಾಹನದಿಂದ ಮಹತ್ವದ ಸ್ಫೋಟಗಳು ಗಣನೀಯ ಪ್ರಮಾಣದ ಸ್ಫೋಟಕ ವಸ್ತುಗಳ ಉಪಸ್ಥಿತಿಯನ್ನು ಸೂಚಿಸಿವೆ"ಎಂದು ಅವರು ತಿಳಿಸಿದ್ದಾರೆ.


ಬಿಲ್ ಅರ್ಬನ್ ಅವರು ನಾಗರಿಕರ ಸಾವುನೋವುಗಳ ಸಾಧ್ಯತೆಗಳನ್ನು ನಿರ್ಣಯಿಸುತ್ತಿರುವುದಾಗಿ ಹೇಳಿದ್ದಾರೆ.ಆದರೂ ಈ ಸಮಯದಲ್ಲಿ ಅವರಿಗೆ ಯಾವುದೇ ಸೂಚನೆಗಳಿಲ್ಲ.ಆದರೆ 'ಭವಿಷ್ಯದ ಸಂಭಾವ್ಯ ಬೆದರಿಕೆಗಳಿಗಾಗಿ ನಾವು ಜಾಗರೂಕರಾಗಿರುತ್ತೇವೆ" ಎಂದು ಅವರು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.