ಸೆಪ್ಟೆಂಬರ್ 3 ಅನ್ನು ʼಸನಾತನ ಧರ್ಮ ದಿನʼವೆಂದು ಘೋಷಣೆ..!
Sanatana Dharma row : ಸೆಪ್ಟೆಂಬರ್ 3 ಅನ್ನು ಸನಾತನ ಧರ್ಮ ದಿನವೆಂದು ಘೋಷಿಸಲಾಗಿದೆ. ಯುಸ್ನ ಲೂಯಿಸ್ವಿಲ್ಲೆಯಲ್ಲಿ ನಡೆದ ಮಹಾ ಕುಂಭ ಅಭಿಷೇಕ ಸಮಾರಂಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Sanatana Dharma Day : ತಮಿಳುನಾಡು ಸಚಿವ, ಸಿಎಂ ಎಂ.ಕೆ. ಸ್ಟಾಲಿನ್ ಪುತ್ರ, ನಟ ಉದಯನಿಧಿ ಸ್ಟಾಲಿನ್ ಹೇಳಿಕೆ ರಾಷ್ಟ್ರಾದ್ಯಂತ ಕೊಲಾಹಲ ಸೃಷ್ಟಿಸಿದೆ. ಬಿಜೆಪಿ ಸೇರಿದಂತೆ ಕೆಲವು ಹಿಂದೂ ಪರ ಸಂಘಟನೆಗಳು ಉದಯನಿಧಿ ವಿರುದ್ಧ ವಾಕ್ಪ್ರಹಾರ ನಡೆಸಿವೆ. ಇದರ ಬೆನ್ನಲ್ಲೆ, ಯುನೈಟೆಡ್ ಸ್ಟೇಟ್ಸ್‌ನ ಒಂದು ನಗರವು ಸೆಪ್ಟೆಂಬರ್ 3 ಅನ್ನು ಸನಾತನ ಧರ್ಮ ದಿನವೆಂದು ಘೋಷಿಸಿದೆ.
ಹೌದು.. ಯುನೈಟೆಡ್ ಸ್ಟೇಟ್ಸ್ನ ಕೆಂಟುಕಿಯ ಲೂಯಿಸ್ವಿಲ್ಲೆ ಮೇಯರ್ ಅವರು ನಗರದಲ್ಲಿ ಸೆಪ್ಟೆಂಬರ್ 3 ಅನ್ನು ಸನಾತನ ಧರ್ಮ ದಿನವೆಂದು ಘೋಷಿಸಿದ್ದಾರೆ. ಲೂಯಿಸ್‌ವಿಲ್ಲೆಯಲ್ಲಿರುವ ಹಿಂದೂ ದೇವಾಲಯದ ಕೆಂಟುಕಿಯಲ್ಲಿ ಮಹಾ ಕುಂಭ ಅಭಿಷೇಕ ಆಚರಣೆಯ ಸಂದರ್ಭದಲ್ಲಿ ಮೇಯರ್ ಕ್ರೇಗ್ ಗ್ರೀನ್‌ಬರ್ಗ್ ಪರವಾಗಿ ಉಪಮೇಯರ್ ಬಾರ್ಬರಾ ಸೆಕ್ಸ್‌ಟನ್ ಸ್ಮಿತ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.
ಚಳಿಗಾಲದ ವೇಳೆ ಕೊರೊನಾ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಮುಖಂಡರಾದ ಚಿದಾನಂದ ಸರಸ್ವತಿ, ಪರಮಾರ್ಥ ನಿಕೇತನದ ಅಧ್ಯಕ್ಷ ಋಷಿಕೇಶ್, ಶ್ರೀ ಶ್ರೀ ರವಿಶಂಕರ್, ಮತ್ತು ಭಗವತಿ ಸರಸ್ವತಿ, ಲೆಫ್ಟಿನೆಂಟ್ ಗವರ್ನರ್ ಜಾಕ್ವೆಲಿನ್ ಕೋಲ್ಮನ್, ಉಪಮುಖ್ಯಸ್ಥರಾದ ಕೇಶಾ ಡೋರ್ಸೆ ಮತ್ತು ಹಲವಾರು ಆಧ್ಯಾತ್ಮಿಕ ಮುಖಂಡರು ಮತ್ತು ಗಣ್ಯರು ಭಾಗವಹಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.