ನವದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕೆಂದು ರಿಪಬ್ಲಿಕ್ ಪಕ್ಷದ ಸಂಸದರು ಟ್ರಂಪ್ ಹೆಸರನ್ನು ನೊಬೆಲ್ ಸಮಿತಿಗೆ ಶಿಫಾರಸ್ಸು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ರವರು ಕೊರಿಯಾ ಯುದ್ದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜೋಂಗ್ ಅನ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ನಡುವೆ ಸಭೆ ಏರ್ಪಡಿಸಿ  ಉಭಯ ದೇಶಗಳ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಪಾತ್ರವನ್ನು ಪರಿಗಣಿಸಿ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಬೇಕೆಂದು ತಿಳಿಸಿದ್ದಾರೆ.


ಸುಮಾರು 17 ರಿಪಬ್ಲಿಕ್ ಸಂಸದರು ನೊಬೆಲ್ ಸಮಿತಿಗೆ ಪತ್ರ ಬರೆದು ಟ್ರಂಪ್ ರವರು  ಕೊರಿಯಾ ಯುದ್ದಕ್ಕೆ ಕೊನೆ ಹಾಡಿದ್ದಲ್ಲದೆ ಮತ್ತು ಈ ಭಾಗವನ್ನು ಅಣ್ವಸ್ತ್ರ ರಹಿತ ಪ್ರದೇಶವಾಗಿ ಪರಿವರ್ತಿಸಲು ಪ್ರಮುಖ ಪಾತ್ರ ವಹಿಸಿದ ಹಿನ್ನಲೆಯಲ್ಲಿ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ  ಪರಿಗಣಿಸಬೇಕೆಂದು ಅವರ ಹೆಸರನ್ನು ಸಮಿತಿಗೆ ನಾಮ ನಿರ್ದೇಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ.