ನವದೆಹಲಿ: ಕರೋನಾ ಲಸಿಕೆ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು  ಬಿಂಬಿಸುವುದು  ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಗತ್ತಿಗೆ ಎಚ್ಚರಿಕೆ ನೀಡಿದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಶ್ರೀಮಂತ ರಾಷ್ಟ್ರಗಳು 'ಲಸಿಕೆ ರಾಷ್ಟ್ರೀಯತೆಗೊಳಿಸುವಿಕೆಯನ್ನು' ತಪ್ಪಿಸಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ. ವಿಶ್ವದ ಬಡ ದೇಶಗಳಲ್ಲಿ ಕಂಡು ಬರುವ ಕೋರೋನಾ ಸೋಂಕು ಕೊನೆಗೊಳ್ಳದೆ ಹೋದರೆ, ಶ್ರೀಮಂತ ರಾಷ್ಟ್ರಗಳು ಸಹ ಮತ್ತೆ ಅದರ ಹಿಡಿತದಿಂದ ಪಾರಾಗಲು ಸಾಧ್ಯವಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.


COMMERCIAL BREAK
SCROLL TO CONTINUE READING

ವಿಶ್ವದಾದ್ಯಂತ ಅಭಿವೃದ್ಧಿಗೊಳ್ಳುತ್ತಿರುವ ಯಾವುದೇ ಕರೋನಾ ಲಸಿಕೆಯನ್ನು ಲಭ್ಯವಾಗುವಂತೆ ಮಾಡುವುದು ಶ್ರೀಮಂತ ರಾಷ್ಟ್ರಗಳ ಹಿತಾಸಕ್ತಿ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸ್ ಹೇಳಿದ್ದರೆ. ಇದರಿಂದ ಈ ಸೋಂಕನ್ನು ವಿಶ್ವಾದ್ಯಂತ ತಡೆಯಬಹುದು. "ಲಸಿಕೆ ರಾಷ್ಟ್ರೀಯತೆ" ಒಳ್ಳೆಯದು ಅಲ್ಲ, ಅದು ನಮಗೆ ಸಹಾಯ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ನ ಆಸ್ಪೆನ್ ಸೆಕ್ಯುರಿಟಿ ಫೋರಂನೊಂದಿಗೆ ಜಿನೀವಾದಲ್ಲಿನ WHO ನ ಪ್ರಧಾನ ಕಚೇರಿಯಿಂದ ವೀಡಿಯೊ-ಲಿಂಕ್ ಮೂಲಕ ಅವರು ಮಾತನಾಡುತ್ತಿದ್ದರು.


ನಾವು ಜಾಗತಿಕ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ. ಇದರಲ್ಲಿ ಎಲ್ಲಾ ದೇಶಗಳು ಪರಸ್ಪರ ಆಳವಾಗಿ ಸಂಪರ್ಕ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ವೇಗವಾಗಿ ಚೇತರಿಸಿಕೊಳ್ಳಲು ಕರೋನಾ ಲಸಿಕೆ ತಯಾರಿಸಲು ಜಗತ್ತು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ವಿಶ್ವದ ಕೆಲವೇ ದೇಶಗಳು ಅಥವಾ ಪ್ರದೇಶಗಳು ಮಾತ್ರ ಈ ಕಾಯಿಲೆಯಿಂದ ಸುರಕ್ಷಿತವಾಗಿರಬೇಕು ಹಾಗೂ ಉಳಿದ ಭಾಗಗಳಲ್ಲಿ ಈ ಸೋಂಕು ಪಸರಿಸಬೇಕು ಇದು ಸಾಧ್ಯವಿಲ್ಲ. ಹೀಗೆ ಒಂದು ವೇಳೆ ನಡೆದರೆ, ಅದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು  ಟೆಡ್ರೊಸ್ ಹೇಳಿದ್ದಾರೆ.


ಈ ಮಾರಕ ರೋಗವು ಜನರ ಜೀವನ ಮತ್ತು ಜೀವನೋಪಾಯವನ್ನು ಅಪಾಯಕ್ಕೆ ದೂಡುತ್ತಿದೆ. ಇದನ್ನು ತಡೆಯಲು ವಿಶ್ವದ ಶ್ರೀಮಂತ ರಾಷ್ಟ್ರಗಳು ಮುಂದಾಳತ್ವ ವಹಿಸಬೇಕು. ಆಗ ಮಾತ್ರ COVID-19 ನಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು. ಹೀಗೆ ಮಾಡುವುದರಿಂದ, ಅವರು ಇತರ ದೇಶಗಳ ಮೇಲೆ ಯಾವುದೇ ರೀತಿಯ ಉಪಕಾರ ಮಾಡುವುದಿಲ್ಲ, ಬದಲಾಗಿ ನೀವು ವಿಶ್ವದ ಇತರ ಭಾಗಗಳಿಂದ ಕರೋನಾವನ್ನು ತೆಗೆದುಹಾಕುವ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವಿರಿ ಎಂದು  ಟೆಡ್ರೊಸ್ ಹೇಳಿದ್ದಾರೆ.