ಜರಗೋಜಾ ಏರ್ ಬೇಸ್ ಶನಿವಾರ ಎಫ್ -18 ಫೈಟರ್ ಜೆಟ್ ಅಪಘಾತಕ್ಕೆ ಸಾಕ್ಷಿಯಾಯಿತು. ದೇಶದ ರಾಜಧಾನಿ ಮ್ಯಾಡ್ರಿಡ್‌ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ವಾಯುನೆಲೆಯಲ್ಲಿ ಪ್ರದರ್ಶನವನ್ನು ನಡೆಸುತ್ತಿರುವಾಗ ಈ ಘಟನೆ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಯುಎಸ್ ನಿರ್ಮಿತ ಯುದ್ಧ ವಿಮಾನವು ಸ್ಪ್ಯಾನಿಷ್ ವಾಯುಪಡೆಗೆ ಸೇರಿದೆ ಎಂದು ವರದಿಗಳು ಹೇಳಿವೆ.ಸದ್ಯಕ್ಕೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ  F-18 ಹಾರ್ನೆಟ್ ಫೈಟರ್ ಜೆಟ್ ವೇಗವಾಗಿ ಎತ್ತರವನ್ನು ಕಳೆದುಕೊಳ್ಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.ಇದಾದ ನಂತರ ನೆಲದಿಂದ ಜ್ವಾಲೆಗಳು ಮತ್ತು ಗಾಢ ಹೊಗೆ ಹೊರಬರುವುದರೊಂದಿಗೆ ದೊಡ್ಡ ಸ್ಫೋಟವು ಕಂಡುಬರುತ್ತದೆ.


ಡಿಫೆನ್ಸ್ ಏವಿಯಾಸಿಯನ್.ಇನ್ಫೋ ಪ್ರಕಾರ, ಮೆಕ್‌ಡೊನೆಲ್ ಡೌಗ್ಲಾಸ್ ಇಎಫ್ -18 ಎಂ ಹಾರ್ನೆಟ್ ಫೈಟರ್ ಜೆಟ್ ಅನ್ನು ಒಳಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಸ್ಪ್ಯಾನಿಷ್ ವಾಯುಪಡೆಯ 15 ನೇ ವಿಂಗ್‌ಗೆ ಸೇರಿದ ವಿಮಾನವು ಪತನಗೊಂಡು ಬೆಂಕಿಗೆ ಆಹುತಿಯಾಯಿತು.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ