ನವದೆಹಲಿ:  ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಾಗ್ದಾದಿಯವರ ಸಾವನ್ನು ಘೋಷಿಸಿದ ಒಂದು ದಿನದ ನಂತರ, ಬ್ಲೂಮ್‌ಬರ್ಗ್ ಯುಎಸ್ ಕಮಾಂಡೋ ದಾಳಿ ನಡೆದ ಸ್ಥಳ ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ.



COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಹಾನಿಗೊಳಗಾದ ಕಾರುಗಳು ಮತ್ತು ಕಟ್ಟಡಗಳೊಂದಿಗೆ ಸಿರಿಯಾದ ಬರಿಷಾ ಎಂದು ಗುರುತಿಸಲ್ಪಟ್ಟಿರುವ ಪ್ರದೇಶದಾದ್ಯಂತ ಭಗ್ನಾವಶೇಷಗಳು ಕಾಣುತ್ತವೆ. ಸ್ಥಳೀಯ ನಿವಾಸಿಯೊಬ್ಬರು ಶನಿವಾರ ರಾತ್ರಿ ನಡೆದ ಘಟನೆ ವಿವರವನ್ನು ಹಂಚಿಕೊಂಡಿದ್ದಾರೆ. 'ಹೆಲಿಕಾಪ್ಟರ್‌ಗಳು ಸುಮಾರು ಮೂರು ಗಂಟೆಗಳ ಕಾಲ ಆಕಾಶದಲ್ಲಿದ್ದವು. ಆಗ ಸುಮಾರು12 ಹೆಲಿಕಾಪ್ಟರ್‌ಗಳಿದ್ದವು. ತದನಂತರ ಒಂದೇ ಗುರಿಯಲ್ಲಿ ಆರು ಕ್ಷಿಪಣಿಗಳೊಂದಿಗೆ ಬಾಗ್ದಾದಿ ಮನೆಗೆ ದಾಳಿ ಮಾಡಲಾಯಿತು 'ಎಂದು ಆ ವ್ಯಕ್ತಿ ವಿವರಿಸಿದ್ದಾನೆ.


ಅಮೆರಿಕದ ಮಿಲಿಟರಿ ನಾಯಿಗಳು ಬೆನ್ನಟ್ಟಿದಾಗ ಅಲ್-ಬಾಗ್ದಾದಿ ಅವರು ಸುರಂಗದ ಕೊನೆಯಲ್ಲಿ ಸಿಕ್ಕಿಬಿದ್ದಿದ್ದಾರೆ, ಆಗ ಅವರು ತನ್ನ ಮೂವರು ಮಕ್ಕಳೊಂದಿಗೆ ಅಲ್-ಬಾಗ್ದಾದಿ ಆತ್ಮಹತ್ಯೆ ಬಾಂಬ್ ಮೂಲಕ ತನ್ನನ್ನು ಮತ್ತು ಮಕ್ಕಳನ್ನು ಸ್ಫೋಟಿಸುತ್ತಾನೆ' ಎಂದು ಟ್ರಂಪ್ ಹೇಳಿದ್ದಾರೆ. 'ಸ್ಫೋಟದಿಂದ ಅವರ ದೇಹವು ವಿರೂಪಗೊಂಡಿದೆ' ಆದರೆ ಪರೀಕ್ಷೆಗಳು ಅವರ ಗುರುತನ್ನು ಧೃಡಪಡಿಸಿವೆ ಎಂದು ಟ್ರಂಪ್ ತಿಳಿಸಿದ್ದಾರೆ.