ನವದೆಹಲಿ:  ಹೊರಗೆ ಹೋಗುವಾಗ ಒಂದೆರಡು ನಿಮಿಷ ಟ್ರಾಫಿಕ್ ಜಾಮ್ ಆದರೆ ಯಾರಿಗಾದರೂ ಎಷ್ಟು ಸಿಟ್ಟು ಬರುತ್ತೆ. ಅದೇ ರೀತಿ ಸುಮ್ಮನೆ ನಮ್ಮೆದುರು ಯಾವುದಾದರೂ ಕಾಡು ಪ್ರಾಣಿ. ಅದರಲ್ಲೂ ಕಾಡಿನ ರಾಜ ಸಿಂಹ ಬಂದರೆ...! ಅಬ್ಬಬ್ಬಾ...! ನೆನೆಸಿಕೊಂಡರೆ ಒಂದು ಕ್ಷಣ ಎದೆ ಝಲ್ ಅನ್ಸುತ್ತೆ. ಅಂತಹದ್ದೇ ಒಂದು ಸನ್ನಿವೇಶದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಸಿಂಹಗಳು ರಸ್ತೆ ಮಧ್ಯದಲ್ಲಿ ಆರಾಮಾಗಿ ಕುಳಿತಿವೆ. ಈ ರಸ್ತೆ ಮೂಲಕ ಸಾಗಲು ಬಂದ ವಾಹನ ಸವಾರರು ಮುಂದೆ ಹೋಗೋಕೂ ಆಗದೆ, ರಸ್ತೆ ಮಧ್ಯದಲ್ಲಿ ಕುಳಿತಿದ್ದ ಸಿಂಹಗಳನ್ನು ಓಡಿಸಲು ಆಗದೆ. ಕನಿಷ್ಠ ಹಾರ್ನ್ ಮಾಡಲು ಧೈರ್ಯವಿಲ್ಲದೆ ಹೇಗೆ ಪರದಾಡಿದರು ಗೊತ್ತಾ...? ಇದರಿಂದ ರಸ್ತೆಯ ಎರಡೂ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಆಯಿತು. ಏತನ್ಮಧ್ಯೆ, ಕೆಲವರು ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.


ವಾಸ್ತವವಾಗಿ, ಇದೆಲ್ಲವೂ ದಕ್ಷಿಣ ಆಫ್ರಿಕಾದ ಅತಿದೊಡ್ಡ ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ಸಂಭವಿಸಿದೆ. ಇಲ್ಲಿನ ಒಂದು ರಸ್ತೆಯಲ್ಲಿ ಸಿಂಹಗಳ ಗುಂಪೊಂದು ವಿಶ್ರಾಂತಿ ಪಡೆಯುತ್ತಿತ್ತು. ಈ ಸಂದರ್ಭದಲ್ಲಿ, ಒಂದು ಕಾರು ಮುಂಭಾಗದಿಂದ ಬರುತ್ತದೆ. ಮುಂದೆ ಏನಾಗುತ್ತದೆ, ಈ ವೀಡಿಯೊದಲ್ಲಿ ನೀವೇ ನೋಡಬಹುದು. ಜಂಗಲ್ ಏಷ್ಯಾ, ಫೇಸ್‌ಬುಕ್ ಪುಟ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಈ ವಿಡಿಯೋವನ್ನು ಒಮ್ಮೆ ನೋಡಿ...


 ಜುಲೈ 8 ರಂದು ಶೇರ್ ಮಾಡಲಾದ ಈ ವೀಡಿಯೊವನ್ನು ಇಲ್ಲಿಯವರೆಗೆ 3.8 ಮಿಲಿಯನ್ ಜನರು ನೋಡಿದ್ದಾರೆ. ಇದನ್ನು 31 ಸಾವಿರಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.