ನವದೆಹಲಿ: ಇಂಡೋನೇಷ್ಯಾದ ದ್ವೀಪದ ಸುಲಾವೆಸಿಯನ್ನು 7.5 ಭಾರಿ ಭೂಕಂಪದ ನಂತರ ಸುನಾಮಿಯಿಂದ ಅಪ್ಪಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಪಿ ಜಿಯೋಫಿಸಿಕ್ಸ್ ಏಜೆನ್ಸಿ ಉಲ್ಲೇಖಿಸಿ ವರದಿ ಮಾಡಿದೆ. ಭೂಕಂಪದ ನಂತರ  ಸುನಾಮಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತ್ತು. 



COMMERCIAL BREAK
SCROLL TO CONTINUE READING

ಅಸೋಸಿಯೇಟೆಡ್ ಪ್ರೆಸ್ನ ಪ್ರಕಾರ ಜನರು ಕಿರಿಚುವ ಮತ್ತು ಭಯದಿಂದ ಓಡಿಹೋಗುತ್ತಿರುವ  ದೃಶ್ಯವು ಈಗ ಇಂಡೋನೇಷಿಯನ್ ಟಿವಿ ತೋರಿಸಿದೆ. ಇದಕ್ಕೂ ಮೊದಲು ದೇಶದ ಕೇಂದ್ರೀಯ ಸುಲಾವೆಸಿ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ.ಇದಕ್ಕೂ ಮೊದಲು ಅದೇ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದನು.ಈ ವರ್ಷದ ಆರಂಭದಲ್ಲಿ ಲಾಂಬೊಕ್ ದ್ವೀಪದಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡ ಭೂಕಂಪಕ್ಕಿಂತ ಹೆಚ್ಚಿನ ತೀವ್ರತೆ ಇತ್ತು ಎಂದು  ಹೇಳಲಾಗಿದೆ.


2004 ರಲ್ಲಿ ಪಶ್ಚಿಮ ಇಂಡೋನೇಶಿಯಾದ ಸುಮಾತ್ರಾ ತೀರದಲ್ಲಿ ಸುನಾಮಿಯಿಂದಾಗಿ  168,000 ಇಂಡೋನೇಶಿಯಾದ ಜನರನ್ನು ಒಳಗೊಂಡಂತೆ ಹಿಂದೂ ಮಹಾಸಾಗರದ 220,000 ಜನರನ್ನು ಬಲಿತೆಗೆದುಕೊಂಡಿತ್ತು.