ಜಕಾರ್ತ: ಸುನಾಮಿ ಪ್ರಪಂಚದಾದ್ಯಂತ ಬಹಳಷ್ಟು ದುರಂತವನ್ನು ಉಂಟುಮಾಡಿದೆ. ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ ಸಂಭವಿಸಿದ್ದು, ಸುಮಾರು 168 ಜನರನ್ನು ಬಲಿ ತೆಗೆದುಕೊಂಡಿದೆ. 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿನಾಶದ ಸುನಾಮಿ ಹೇಗೆ ಉಂಟಾಯಿತು ಎಂಬ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಪಾಪ್ ಬ್ಯಾಂಡ್'ನ ನೇರಪ್ರಸಾರದ ವೇಳೆ ಹಠಾತ್ ಆಗಿ 'ಸುನಾಮಿ' ಅಪ್ಪಳಿಸಿರುವ ದೃಶ್ಯ ಸೆರೆಯಾಗಿದೆ.


ಹೊಸ ವರ್ಷವನ್ನು ಆಚರಿಸಲು ನೆರೆದಿದ್ದ ಜನ:
'ಸೆವೆನ್ಟೀನ್' ಎಂಬ ಹೆಸರಿನ 'ಪಾಪ್ ಬ್ಯಾಂಡ್' ಟ್ಯಾಂಗ್ಗುಂಗ್ ಲೆಯುಂಗ್ ನಡುವಿನ ರೆಸಾರ್ಟ್ನಲ್ಲಿ ಲೈವ್ ಪ್ರದರ್ಶನದ ವೇಳೆ ಸುನಾಮಿ ಸಂಭವಿಸಿದೆ ಎಂದು ಹೇಳಲಾಗಿದೆ. ಹೊಸ ವರ್ಷವನ್ನು ಆಚರಿಸಲು, ಸ್ಥಳೀಯ ವಿದ್ಯುತ್ ಇಲಾಖೆಯಿಂದ ಸುಮಾರು 200 ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಅಲ್ಲಿ ಉಪಸ್ಥಿತರಿದ್ದರು. ನೆರೆದಿದ್ದ ಜನ ಸಂಗೀತದ ಅಮಲಿನಲ್ಲಿ ತೇಲುತ್ತಿರುವುದನ್ನು, ಅದೇ ವೇಳೆ ಇದ್ದಕ್ಕಿದ್ದಂತೆ ಸುನಾಮಿ ಅಪ್ಪಳಿಸಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.