Trending Video: ಹಲವು ಬಾರಿ ಕೆಲ ದೇಶಗಳ ಸಸತ್ತಿನಲ್ಲಿ ನಡೆಯುವ ಚರ್ಚೆಗಳು ಎಷ್ಟೊಂದು ಕಾವಿನಿಂದ ಕೂಡಿರುತ್ತವೆ ಎಂದರೆ ಕ್ಷಣಾರ್ಧದಲ್ಲಿ ಅವು ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತವೆ. ಇತ್ತೀಚೆಗಷ್ಟೇ ಆಫ್ರಿಕಾದ ಸೆನೆಗಲ್‌ನಲ್ಲಿ ಇಬ್ಬರು ಸಂಸದರ ಮಾತಿನ ಚಕಮಕಿ ನಂತರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರಲ್ಲಿ ಪುರುಷ ಸಂಸದರೊಬ್ಬರು ಮಹಿಳಾ ಸಂಸದೆಗೆ ಥಳಿಸಲು ಆರಂಭಿಸಿದ್ದಾರೆ. ಆದರೆ, ನಂತರ ಇದೊಂದು ಕೇವಲ ನೆಪವಾಗಿ ಪರಿಣಮಿಸಿದ್ದು, ಬಳಿಕ ಸಂಸತ್ತಿನಲ್ಲಿ ಭಾರಿ ಗುದ್ದಾಟವೆ ನಡೆದಿದೆ


COMMERCIAL BREAK
SCROLL TO CONTINUE READING

ಸಂಸತ್ತಿನಲ್ಲಿ ನಡೆದ ಬಜೆಟ್ ಅಧಿವೇಶನ
ಈ ಘಟನೆಯು ಸೆನೆಗಲ್ ಸಂಸತ್ತಿನಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗಿದೆ. ಮಾಧ್ಯಮ ವರದಿಗಳ ಪ್ರಕಾರ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ಇದೇ ವೇಳೆ ಆಡಳಿತಾರೂಢ ಮಹಿಳಾ ಸಂಸದೆ ಅಮಿ ನದಿಯೆ ಗನಿಬಿ ಹಾಗೂ ವಿರೋಧ ಪಕ್ಷದ ಸಂಸದ ಮಸ್ಸಾತಾ ಸಾಂಬ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.. ಈ ಚರ್ಚೆಯು ಕೆಲವು ನೀತಿಯ ಬಗ್ಗೆ ನಡೆದಿತ್ತು. ಆದರೆ ಈ ಚರ್ಚೆಯು ನಂತರ ತನ್ನ ದಿಕ್ಕನ್ನೇ ಬದಲಾಯಿಸಿದೆ.


ಮಹಿಳಾ ಸಂಸದನನ್ನು ಹೊಡೆಯಲು ಆರಂಭಿಸಿದ ಎಂಪಿ
ಚರ್ಚೆ ವಿಕೋಪಕ್ಕೆ ತಲುಪಿದಾಗ ಪುರುಷ ಸಂಸದ ವೇಗವಾಗಿ ಮಹಿಳಾ ಸಂಸದೆಯಾ ಬಳಿಗೆ ಧಾವಿಸಿದ್ದಾರೆ. ಇದೇನು ಎಂಬುದು ಅಲ್ಲಿರುವ ಇತರ ಸಂಸದರಿಗೆ ಅರ್ಥವಾಗುವ ಮೊದಲು, ಅವರು ಮಹಿಳಾ ಸಂಸದೆಯನ್ನು ಹೊಡೆಯಲು ಪ್ರಾರಂಭಿಸಿದ್ದಾರೆ. ಅವರು ಹಿಂದೆ ಮುಂದೆ ಯೋಚಿಸದೆಯೇ ಮಹಿಳೆಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದ್ದಾರೆ. ಇದಾದ ನಂತರ ಇತರ ಸದಸ್ಯರು ಅಲ್ಲಿಗೆ ಬಂದು ಇಬ್ಬರನ್ನೂ ಹಿಡಿದು ಪರಸ್ಪರರನ್ನು ಬೇರ್ಪಡಿಸಿದ್ದಾರೆ. ಆದರೆ, ಬೆಂಕಿ ಅಷ್ಟೊತ್ತಿಗೆ ಹೊತ್ತು ಕೊಂಡಿದೆ.


ಇದನ್ನೂ ಓದಿ-ಬಟ್ಟೆ ಹರಿದು, ಬ್ಲೇಡ್‌ನಿಂದ ಕತ್ತರಿಸಿ... 6 ತಾಸು ಮಹಿಳಾ ಕಲಾವಿದೆ ಅನುಭವಿಸಿದ್ದಳು ಚಿತ್ರಹಿಂಸೆ


ಇದರಿಂದ ಪಿತ್ತ ನೆತ್ತಿಗೇರಿದ ಮಹಿಳಾ ಸಂಸದೆ ಪುರುಷ ಸಂಸದನ ಮೇಲೆ ತಾನು ಕುಳಿತಿರುವ ಕುರ್ಚಿಯನ್ನೇ ಎಸೆದಿದ್ದಾಳೆ. ನಂತರ ಈ ವಾಗ್ವಾದ ಇತರ ಸಂಸದರ ಮಧ್ಯೆ ಶುರುವಾಗಿದೆ. ಬಳಿಕ ಆಡಳಿತಾರೂಢ ಶಾಸಕರು ಮತ್ತು ವಿಪಕ್ಷದಲ್ಲಿ ಕುಳಿತ ಸಂಸದರ ಮಧ್ಯೆ ಭಾರಿ ಗುದ್ದಾಟ ನಡೆದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ನಂತರ ಹೇಗೋ ಈ ಜಗಳ ಅಂತ್ಯವಾಗಿದೆ.


ಇದನ್ನೂ ಓದಿ-Viral Video : ಅಡುಗೆಮನೆಯಲ್ಲಿ ಹೆಬ್ಬಾವುಗಳ ಸರಸ! ವಿಡಿಯೋ ವೈರಲ್‌

ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಎರಡು ದಿನಗಳ ಹಿಂದೆ ಸಂಭವಿಸಿದೆ ಮತ್ತು ಆ ಸಮಯದಲ್ಲಿ ಸೆನೆಗಲ್ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿತ್ತು. ಕಲಾಪದಲ್ಲಿಯೇ, ಮಹಿಳಾ ಸಂಸದರು ಅಧ್ಯಕ್ಷರ ಮೂರನೇ ಅವಧಿಯನ್ನು ವಿರೋಧಿಸುವ ನಾಯಕನನ್ನು ಟೀಕಿಸಿದ್ದಾರೆ ಎನ್ನಲಾಗಿದೆ, ನಂತರ ಗದ್ದಲ ಆರಂಭಗೊಂಡಿದೆ. ಅದೇನೇ ಇದ್ದರೂ ಕೂಡ ಪ್ರಸ್ತುತ ವಿಡಿಯೋ ಮಾತ್ರ ವೈರಲ್ ಆಗಿದ್ದು, ನಿಜ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.